ಕೊಪ್ಪಳ ಜಿಲ್ಲೆಯ ಆನೆಗೊಂದಿಯ ಐತಿಹಾಸಿಕ ಗಗನ್ ಮಹಲ್ ವಿಕ್ಷಣೆ ಮಾಡಿದ ಕಂಟೆಂಟ್ ಕ್ರಿಯೇರ್ಟಸ್ಗಳು.
- ಐತಿಹಾಸಿಕ ಹಾಗೂ ಸಾಂಸತಿಕ ಪರಂಪರೆಯ ಮನನ
ಕೊಪ್ಪಳ : ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಯುರೋಪ್ನ ವಿವಿಧ ದೇಶಗಳ 22 ಜನ ಕಂಟೆಂಟ್ ಕ್ರಿಯೇರ್ಟಸ್ ಹಾಗೂ ಇನ್ಫ್ಲೂಯನ್ಸರ್ಸ್ ಗುರುವಾರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಅಂಜನಾದ್ರಿ ಬೆಟ್ಟ ಮತ್ತು ಆನೆಗುಂದಿಗೆ ಭೇಟಿ ನೀಡಿ ಅಲ್ಲಿನ ಐತಿಹಾಸಿಕ ಹಾಗೂ ಸಾಂಸತಿಕ ಪರಂಪರೆಯನ್ನು ವೀಕ್ಷಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ತಂಡಕ್ಕೆ ಅಂಜನಾದ್ರಿ, ಆನೆಗುಂದಿ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳ ಸಂದರ್ಶನ ಮಾಡಿಸಲಾಯಿತು. ಪ್ರವಾಸದ ವೇಳೆ ಸ್ಥಳಗಳ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಮಹತ್ವ ಹಾಗೂ ಪ್ರವಾಸೋದ್ಯಮದ ವಿಶೇಷತೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಪ್ರವಾಸೋದ್ಯಮ ಇಲಾಖೆಯಿಂದ ಯುರೋಪ್ ತಂಡದ ಸದಸ್ಯರಿಗೆ ಕೊಪ್ಪಳ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಕುರಿತು ಮಾಹಿತಿಯಿರುವ ಬ್ರೋಚರ್ಗಳನ್ನು ವಿತರಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿಜಯನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಹೊಸಪೇಟೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕ ಶೆಜೇಶ್ವರ, ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಇತರರಿದ್ದು.