ಗಂಗಾವತಿಯಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ನಿಮಿತ್ತ ದಾಸೋಹ ದಿನ ಆಚರಿಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಷ್ಟ್ರೀಯ ಬಸವದಳ ಕಾರ್ಯದರ್ಶಿ ವೀರೇಶರಡ್ಡಿ, ಕಲಾವಿದ ವಿಷ್ಣುತೀರ್ಥ ಜೋಶಿ ಇತರರಿದ್ದರು.
ಶಿವಕುಮಾರ ಸ್ವಾಮೀಜಿ ಕರ್ತತ್ವದಿಂದ ತ್ರಿವಿಧ ದಾಸೋಹ
ಗಂಗಾವತಿ: 50 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಿದ್ಧಗಂಗಾ ಮಠದ ಅಕ್ಷರ, ಅರಿವು, ಆಶ್ರಯ ಕೈಂಕರ್ಯ ಇಂದು 10 ಸಾವಿರ ವಿದ್ಯಾರ್ಥಿಗಳ ಮಿತಿ ಮೀರಿ ಬೆಳೆದಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯದ ವೇದಿಕೆಯಲ್ಲಿ ಬಸವ ಪರ ಸಂಘಟನೆಗಳಿಂದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ದಾಸೋಹ ದಿನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಕರ್ತತ್ವ ಶಕ್ತಿಯಿಂದ ತ್ರಿವಿಧ ದಾಸೋಹ ಸಾಧ್ಯವಾಗಿದೆ. ಅಂತಹ ಮಹಾತ್ಮರ ಕಾಲದಲ್ಲಿ ನಾವು ಇದ್ದೇವೆ ಎನ್ನುವುದೇ ಅಭಿಮಾನದ ಸಂಗತಿ ಎಂದರು. ನಂತರ ವಚನ ಮಂಗಲ ಮತ್ತು ದಾಸೋಹ ನಡೆಯಿತು.
ರಾಷ್ಟ್ರೀಯ ಬಸವದಳ ಕಾರ್ಯದರ್ಶಿ ವೀರೇಶರಡ್ಡಿ, ಕಲಾವಿದ ವಿಷ್ಣುತೀರ್ಥ ಜೋಶಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಚನ್ನಬಸವ ಕೊಟಗಿ, ಅರಳಿ ನಾಗಭೂಷಣ, ದಿಲೀಪಕುಮಾರ, ಕೆ.ವಂದಾಲ, ಬಸವರಾಜ, ಕವಿತಾ, ಎ.ಕೆ.ಮಹೇಶಕುಮಾರ, ಗಾಳಿ ರುದ್ರಪ್ಪ, ಶಾಮಮೂರ್ತಿ ಐಲಿ, ಅಮರೇಗೌಡ, ವೀರಣ್ಣ ಅರಹುಣಸಿ, ಶರಭಣ್ಣ ಇತರರಿದ್ದರು. ತಾಲೂಕಿನ ಹಿರೇಬೆಣಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸೋಹ ದಿನ ಆಚರಿಸಲಾಯಿತು. ಶಾಲಾಶಿಕ್ಷಕರು ಮತ್ತು ಗ್ರಾಮಸ್ಥರಿದ್ದರು.