ಕೊಪ್ಪಳದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ಎಸ್.ಬಾಲಚಂದ್ರನ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಪಂ ಇಒ ದುಂಡಪ್ಪ ತುರಾದಿ ಇದ್ದರು.
ಕೊಪ್ಪಳ: ಪಂಚ ಗ್ಯಾರಂಟಿಗಳು ಅರ್ಹರಿಗೆ ತಲುಪಬೇಕು. ಯೋಜನೆ ನೀಡುವಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್.ಬಾಲಚಂದ್ರನ್ ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಸದಸ್ಯ ಅನ್ನದಾನಯ್ಯ ಮಾತನಾಡಿ, ಕೊಪ್ಪಳ-ಮಂಗಳೂರು ಬಸ್ ಬೆಟಗೇರಿ ಗ್ರಾಮಕ್ಕೆ ಬರುತ್ತಿಲ್ಲ. ಮತ್ತೂರ ಗ್ರಾಮದಲ್ಲಿ ಕೆಲ ಮಹಿಳೆಯರು ಈವರೆಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಅಧ್ಯಕ್ಷರು ಉತ್ತರಿಸಿ, ಅರ್ಜಿ ಸಲ್ಲಿಕೆ ನಿರಂತರ ಪ್ರಕ್ರಿಯೆ. ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದರು.
ಕೊಪ್ಪಳ-ಹೊಸಪೇಟೆ ಬಸ್‌ಗಳು ಮುನಿರಾಬಾದ್ ಗ್ರಾಮದೊಳಗೆ ಬರುತ್ತಿಲ್ಲ. ಸಂಬಂಧಿಸಿದ ಮಾರ್ಗಗಳ ಎಲ್ಲ ಗ್ರಾಮಗಳಿಗೆ ತೆರಳುವಂತೆ ಸೂಚಿಸಿದರು. ಅಧಿಕಾರಿಗಳು ಆಗಸ್ಟ್ ತಿಂಗಳವರೆಗೆ ಲಾನುಭವಿಗಳಿಗೆ ಹಣ ಜಮಾ ಆಗಿದೆ. ಆದಾಯ ತೆರಿಗೆ ಪಾವತಿದಾರರು ಯೋಜನೆ ಪಡೆಯಲು ಅರ್ಹರಲ್ಲವೆಂದು ಸಿಡಿಪಿಒ ರೋಹಿಣಿ ತಿಳಿಸಿದರು. ಬಳ್ಳಾರಿ ಮತ್ತು ಕುರುಗೋಡು ಟಕ ವಾಹನಗಳಿಂದ ತೊಂದರೆಯಾಗಿದ್ದು, ಕೊಪ್ಪಳದ ಟಕದ ಎಲ್ಲ ಬಸ್‌ಗಳು ಮುನಿರಾಬಾದ್ ಡ್ಯಾಂ ಮೂಲಕ ಪ್ರಯಾಣಿಸುತ್ತವೆ ಎಂದು ಡಿಪೋ ಅಧಿಕಾರಿಗಳು ವಿವರಿಸಿದರು.
ಗೃಹ ಜ್ಯೋತಿ ಯೋಜನೆ ಜಾರಿಗೂ ಮುನ್ನ ಕೆಲವರ ಬಿಲ್ ಬಾಕಿ ಇದೆ. ಅದನ್ನು ವಸೂಲಿ ಮಾಡುವಾಗ ಅಧಿಕಾರಿಗಳು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದು ನಿಲ್ಲಬೇಕೆಂದು ಸದಸ್ಯರು ಅಧ್ಯಕ್ಷರ ಗಮನ ತಂದರು. ಗ್ರಾಹಕರ ಮನವೊಲಿಸಿ ಬಿಲ್ ವಸೂಲಿ ಮಾಡುವುದು. ಅನುಚಿತ ವರ್ತನೆ ತೋರುವ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ಜೆಸ್ಕಾಂ ಅಧಿಕಾರಿಗಳು ಸೂಚಿಸಿದರು.
ಸದಸ್ಯ ದೇವರಾಜ ನಡುವಿನ ಮನೆ ನಗರ ಪ್ರದೇಶದಲ್ಲಿ ಜಂಗಲ್ ಕಟಿಂಗ್ ಮಾಡಿ ವಿದ್ಯುತ್ ಸುರಕ್ಷತೆ ಬಗ್ಗೆ ಕ್ರಮವಹಿಸಲು ಒತ್ತಾಯಿಸಿದರು. ಸದಸ್ಯ ಲಕ್ಷ್ಮಣ ಡೊಳ್ಳಿನ್ ಮಾತನಾಡಿ, ಪಡಿತರ ವಿತರಣೆಯಲ್ಲಿನ ಸಮಸ್ಯೆ ಪರಿಹಾರಕ್ಕೆ ವಾಟ್ಸಾಪ್ ಗ್ರೂಪ್ ರಚಿಸಿ ಕ್ರಮವಹಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಅನ್ನಭಾಗ್ಯ ಯೋಜನೆ ನಾಮಲಕ ಅಳವಡಿಸುವಂತೆ ಆಗ್ರಹಿಸಿದರು. ಸಂದರ್ಶನ ಪುಸ್ತಕ ಇಡುವಂತೆ ಸದಸ್ಯೆ ಜ್ಯೋತಿ ಗೊಂಡಬಾಳ ಒತ್ತಾಯಿಸಿದರು. ಪಡಿತರ ವಿತರಣೆ ವೇಳೆ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲಿಸಬೇಕು. ಸಂದರ್ಶನ ಪುಸ್ತಕದಲ್ಲಿ ಭೇಟಿ ವಿವರ ದಾಖಲಿಸುವಂತೆ ಅಧ್ಯಕ್ಷರು ಸೂಚಿಸಿದರು.
ತಾಪಂ ಇಒ ದುಂಡಪ್ಪ ತುರಾದಿ, ಸಮಿತಿ ಸದಸ್ಯರಾದ ಸವಿತಾ ಗೊರಂಟ್ಲಿ, ಪರಶುರಾಮ ಕೊರವರ ಇತರರಿದ್ದರು.
ಯುವನಿಧಿ ಯೋಜನೆ ಅರ್ಜಿ ಸಲ್ಲಿಕೆ ತಾಂತ್ರಿಕ ಸಮಸ್ಯೆ ಸರಿಪಡಿಸಿ ಪ್ರಚಾರ ಕೈಗೊಳ್ಳಿ. ಗ್ರಂಥಾಲಯ ಸೇರಿ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಪಂಚ ಗ್ಯಾರಂಟಿಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ.