ಬಾದಿಮನಾಳ ಗ್ರಾಮದ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ತಾಪಂ ಇಒ ಅಮರೇಶ ಮಾಹಿತಿ ನೀಡಿದರು. ತಾಪಂ ಎಡಿ ನಿಂಗನಗೌಡ, ಕೂಲಿಕಾರರು, ಗ್ರಾಪಂ ಸಿಬ್ಬಂದಿ, ಕಾಯಕ ಬಂಧುಗಳು ಇದ್ದರು. 
ಕೊಪ್ಪಳ

ವೈಯಕ್ತಿಕ ಕಾಮಗಾರಿಗಿದೆ ಅವಕಾಶ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ವಿಬಿ ಜಿ ರಾಮ್ ಜಿ ಯೋಜನೆ ಕುರಿತು ತಾಪಂ ಇಒ ಅಮರೇಶ ಮಾಹಿತಿ

ಕುಷ್ಟಗಿ: ವಿಬಿ ಜಿ ರಾಮ್ ಜಿ ಯೋಜನೆಯಡಿ ಒಂದು ಕುಟುಂಬ ವರ್ಷಕ್ಕೆ 125 ಮಾನವ ದಿನಗಳ ಸೃಜನೆಗೆ ಅವಕಾಶವಿದ್ದು, ಎಲ್ಲ ಕೂಲಿಕಾರರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಪಂ ಇಒ ಅಮರೇಶ ಹೇಳಿದರು.

ಬಾದಿಮನಾಳ ಗ್ರಾಮದ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಗುರುವಾರ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಬಿ ಜಿ ರಾಮ್ ಜಿ ಯೋಜನೆಯಡಿ ದಿನಕ್ಕೆ 382ರೂ. ಕೂಲಿ ನಿಗದಿಪಡಿಸಲಾಗಿದೆ. ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುವುದು. ಗ್ರಾಪಂಯಲ್ಲಿ ನಮೂನೆ-6 (ಕೆಲಸದ ಅರ್ಜಿ) ಸಲ್ಲಿಸಿ ಕೆಲಸ ಪಡೆಯಬೇಕು. ಜತೆಗೆ ಯೋಜನೆಯಡಿ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದು. ವೈಯಕ್ತಿಕ ಕಾಮಗಾರಿಗಳಡಿ ಜಾನುವಾರು ಶೆಡ್, ಕೋಳಿ ಶೆಡ್, ಕೃಷಿಹೊಂಡ ನಿರ್ಮಾಣ ಸೇರಿ ಇತರ ತೋಟಗಾರಿಕ ಬೆಳೆ ಬೆಳೆಯಲು ಅವಕಾಶವಿದೆ ಎಂದರು.
ತಾಪಂ ಎಡಿ ನಿಂಗನಗೌಡ ವಿ.ಎಚ್ ಮಾತನಾಡಿದರು. ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ ಜಿ., ತಾಂತ್ರಿಕ ಸಂಯೋಜಕ ಬಸವರಾಜ್ ಕೆ., ತಾಂತ್ರಿಕ ಸಹಾಯಕ ವಿಜಯ ಮಹಾಂತೇಶ್ ಇತರರಿದ್ದರು.