ಯಲಬುರ್ಗಾ ತಾಲೂಕಿನ ಬುಕನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಫಲಾನುಭವಿಗಳು ಹಾಗೂ ಜನಸಂಪರ್ಕ ಸಭೆಯಲ್ಲಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿದರು. ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಅಧಿಕಾರಿಗಳಾದ ಮಲ್ಲಿಕಾರ್ಜುನ, ಬೆಟದೇಶ ಮಾಳೇಕೊಪ್ಪ, ಅಶೋಕ ಗೌಡರ, ಲಿಂಗನಗೌಡ ಪಾಟೀಲ್ ಇತರರಿದ್ದರು. 
ಕೊಪ್ಪಳ

ಅಭಿವೃದ್ಧಿಗೆ ಯಾವುದೇ ತೊಂದರೆ ಇಲ್ಲ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಜನಸಂಪರ್ಕ ಸಭೆ
  • ಗ್ಯಾರಂಟಿ ಯೋಜನೆ
  • ಫಲಾನುಭವಿ

ಅಭಿವೃದ್ಧಿಗೆ ಯಾವುದೇ ತೊಂದರೆ ಇಲ್ಲ

ಯಲಬುರ್ಗಾ: ರಾಜ್ಯ ನೀರಾವರಿ ಯೋಜನೆಗಳು ಮತ್ತು ಸಮಸ್ಯೆಗಳ ಕುರಿತು ಸದನದಲ್ಲಿ ಹೆಚ್ಚು ಮಾತನಾಡಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ, ಉಚ್ವಲಕುಂಟಾ ಹಾಗೂ ಬುಕನಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಅಡಿಗಲ್ಲು, ಉದ್ಘಾಟನೆ, ಗ್ಯಾರಂಟಿ ಯೋಜನೆ ಫಲಾನುಭವಿಗಳು ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಕೃಷ್ಣಾ ಕಣಿವೆಯ ಎಲ್ಲ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಠರಾವು ಪಾಸ್ ಮಾಡಲಾಗಿದೆ. ಈ ಕುರಿತು ಸಲಹೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಜನಪರ ಕೆಲಸ ಮಾಡುತ್ತಿದೆ.
ಕ್ಷೇತ್ರದ ಮಹಿಳೆಯರಿಗೆ 58 ಸಾವಿರ ಕೋಟಿ ರೂ. ಗೃಹಲಕ್ಷ್ಮಿ ಹಣ ನೀಡಲಾಗುತ್ತಿದೆ. 2200 ವಿದ್ಯಾರ್ಥಿಗಳಿಗೆ ಯುವನಿಧಿ ಭತ್ಯೆ ನೀಡಲಾಗಿದೆ. 54 ಸಾವಿರ ಮನೆಗಳಿಗೆ ಗೃಹಜ್ಯೋತಿಯಡಿ 200 ಯೂನಿಟ್ ಹಾಗೂ ತಾಲೂಕಿನ 21 ಸಾವಿರ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ತಿಳಿಸಿದರು.
ಇನ್ನೂ ಎರಡೂವರೆ ವರ್ಷ ನಮ್ಮ ಸರ್ಕಾರವಿರುತ್ತದೆ. ಅಭಿವೃದ್ಧಿಗೆ ಯಾವುದೇ ತೊಂದರೆ ಇಲ್ಲ. ಅಧಿವೇಶನದಲ್ಲಿ ಅತೀ ಹೆಚ್ಚು ಮಾತನಾಡಿದ್ದೇನೆ. ಸಿಎಂ ನನ್ನ ಭಾಷಣ ಆಲಿಸಿದ್ದಾರೆ. ಶಾಸಕ, ಮಂತ್ರಿ ನೀರಾವರಿ ಮಾಡುವುದಿಲ್ಲ ಇಡೀ ಸರ್ಕಾರವೇ ಮಾಡಬೇಕು. ಇಂತಹ ಮಹತ್ತರ ಕಾರ್ಯ ಕೈಗೊಳ್ಳಲು ಕೃಷ್ಣಾ ಬಿ ಸ್ಕೀಂ ಕೋರ್ಟ್‌ನಲ್ಲಿ ಸ್ಟೇ ಆಗಿರುವುದು ಸಮಸ್ಯೆಯಾಗಿದೆ.
ಆದ್ದರಿಂದ ಕೆರೆ ತುಂಬಿಸಲಾಗಿದೆ. ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಪಡಿಸಿದ್ದು ಸರಿಯಲ್ಲ. ಕೇಂದ್ರ ರಾಜ್ಯಕ್ಕೆ ಹಣ ನೀಡುತ್ತಿಲ್ಲ. ಬಜೆಟ್ ಬರೆಯಲು ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಮ್ಯಾನೇಜರ್ ಫೋಸ್ಟ್ ಕೊಟ್ಟಿದ್ದಾರೆ. ಜತೆಗೆ 21 ಕೆರೆಗಳನ್ನು ತುಂಬಿಸಲು ಅನುದಾನ ನೀಡಿದ್ದಾರೆ. ಗ್ರಾಪಂ ಮಟ್ಟದಲ್ಲಿ ಆಗುವ ಕೆಲಸ ಕಾರ್ಯಗಳನ್ನು ನನ್ನ ಬಳಿ ತಂದರೇ ಹೇಗೆ ಎಂದು ಪ್ರಶ್ನಿಸಿದರು.
ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಅಧಿಕಾರಿಗಳಾದ ಮಲ್ಲಿಕಾರ್ಜುನ, ಬೆಟದೇಶ ಮಾಳೇಕೊಪ್ಪ, ಅಶೋಕ ಗೌಡರ, ಲಿಂಗನಗೌಡ ಪಾಟೀಲ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಸುಧೀರ ಕೊರ್ಲಳ್ಳಿ, ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ವೀರನಗೌಡ ಪಾಟೀಲ್, ಮಹೇಶ ಹಳ್ಳಿ, ಶರಣಪ್ಪ ಗಾಂಜಿ, ರಾಮಣ್ಣ ಸಾಲಭಾವಿ, ಡಾ.ಶಿವನಗೌಡ ದಾನರಡ್ಡಿ, ಅಪ್ಪಣ್ಣ ಜೋಶಿ, ರುದ್ರಪ್ಪ ಮರಕಟ್, ಪರೀದಾಬೇಗಂ, ಹನುಮಗೌಡ ಪೊಲೀಸ್‌ಪಾಟೀಲ್, ಮಂಜುನಾಥ, ನಾಗರಾಜ ಇತರರಿದ್ದರು.