ಹೊಸ್ಕೇರಾ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗಾಗಿ ಕಲಿಕೇರಿ ಕೆರೆಯಲ್ಲಿ ಕೈಗೊಂಡ ಹೂಳೆತ್ತುವ ಕಾಮಗಾರಿಯನ್ನು ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಪರಿಶೀಲಿಸಿದರು. ಹೊಸ್ಕೇರಾ ಗ್ರಾಪಂ ಪಿಡಿಒ ಕಿರಣ್ ಕುಮಾರ್, ತಾಂತ್ರಿಕ ಸಂಯೋಜಕ ಬಸವರಾಜ ಜಟಗಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕ ಶರಣಯ್ಯ, ಬಿಎ್ಟಿ ಯಂಕೋಬ ಇತರರಿದ್ದರು.
- ಮಹಾಂತಗೌಡ ಪಾಟೀಲ್ ಸಲಹೆ
- ಗಂಗಾವತಿ ಹೊಸ್ಕೇರಾ ಗ್ರಾಪಂ ವಿಬಿ ಜಿ ರಾಮ್ ಜಿ
ಗಂಗಾವತಿ: ಗ್ರಾಮೀಣ ಜನರಿಗೆ ಸ್ಥಳೀಯವಾಗಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಒದಗಿಸಲಾಗುತ್ತಿದ್ದು, ಹಲವು ಸೌಲಭ್ಯ ಕಲ್ಪಿಸಲಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಹೇಳಿದರು.
ಹೊಸ್ಕೇರಾ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗಾಗಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಲಿಕೇರಿ ಕೆರೆಯಲ್ಲಿ ಕೈಗೊಂಡ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಅಂತರ್ಜಲ ಹೆಚ್ಚಳಕ್ಕೆ ಕೆರೆ ಪುನಶ್ಚೇತನ ಪ್ರಮುಖವಾಗಿದ್ದು, ಪ್ರತಿಯೊಬ್ಬರೂ ಕೆರೆ ಅಭಿವೃದ್ಧಿಗೆ ಶ್ರಮಿಸಬೇಕು. ಯೋಜನೆಯಡಿ ಒಂದು ಕುಟುಂಬಕ್ಕೆ ವಾರ್ಷಿಕ 125 ಮಾನವ ದಿನಗಳ ಸಜನೆಗೆ ಅವಕಾಶವಿದೆ. ದಿನಕ್ಕೆ 382 ಕೂಲಿ ನೀಡಲಾಗುತ್ತಿದ್ದು, ಹಲವು ಸೌಲಭ್ಯಗಳಿವೆ. ಆಸ್ತಿ ಸೃಜನೆಗೆ ಮತ್ತು ಗ್ರಾಮೀಣ ಜನರಿಗೆ ಯೋಜನೆ ವರದಾನವಾಗಿದೆ. ಕೂಲಿಕಾರರಿಗೆ ದಿನಕ್ಕೆ ಎರಡು ಬಾರಿ ಕಡ್ಡಾಯ ಎನ್‌ಎಂಎಂಎಸ್ ಹಾಜರಿ ವ್ಯವಸ್ಥೆಯಿದೆ ಎಂದರು.
ಯೋಜನೆಯಡಿ ಆ.15ರಿಂದ ಜಾಬ್‌ಕಾರ್ಡ್ ಮೇಳ ಆರಂಭಿಸಿದ್ದು, ಈವರೆಗೆ ನೋಂದಾಯಿಸದ ಕೂಲಿಕಾರರ ಕುಟುಂಬಗಳು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಕೂಲಿಕಾರರ ಸೇರ್ಪಡೆಗೆ ಅವಕಾಶವಿದೆ ಎಂದರು.