ಅಳವಂಡಿ ಸಮೀಪದ ಗುಡಗೇರಿಯಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಸಂಗೀತ ನಿರ್ದೇಶಕ ಬಸವರಾಜ ಅಡವಳ್ಳಿ ಅವರನ್ನು ಗೌರವಿಸಲಾಯಿತು. ಸಾಹಿತಿ ಎಂ.ಡಿ. ಗಂಡಗುದುರಿ, ಪ್ರಮುಖರಾದ ಶರಣಯ್ಯ, ಹನುಮಂತಪ್ಪ ಬೀಳಗಿ, ಜಗದೀಶ ಮುಕಿ, ಬಸವರಾಜ ಅಡವಳ್ಳಿ ಇತರರಿದ್ದರು. 
ಕೊಪ್ಪಳ

ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪ್ರೇಕ್ಷಕರಿಗೆ
  • ಮನರಂಜನೆ
  • ಸಾಹಿತ್ಯ
ಅಳವಂಡಿ: ನಾಟಕ ಆಕರ್ಷಕ ಸಾಹಿತ್ಯ ಪ್ರಕಾರವಾಗಿದೆ. ಅಭಿನಯದ ಮೂಲಕ ಜೀವಂತಗೊಳಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ ಎಂದು ಸಾಹಿತಿ ಎಂ.ಡಿ. ಗಂಡಗುದುರಿ ತಿಳಿಸಿದರು.
ಸಮೀಪದ ಗುಡಗೇರಿ ಗ್ರಾಮದಲ್ಲಿ ಶ್ರೀಗುರು ಪುಟ್ಟರಾಜ ನಾಟ್ಯ ಸಂಘ ಗುಡಗೇರಿ ಕಲಾ ರಸಿಕರು ಅಭಿನಯಿಸಿದ ‘ತವರಿನಲ್ಲಿ ನೆಲೆ ಇಲ್ಲ ತಂಗಿ’ ಅರ್ಥಾತ್ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ನಾಟಕಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿ ಕಲೆ ಅಭಿನಯಿಸುವುದು ಕಡಿಮೆಯಾಗುತ್ತಿದ್ದು ಈ ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಶಿಕ್ಷಕ ಹನುಮಂತಪ್ಪ ಬೀಳಗಿ ಮಾತನಾಡಿ, ಕಾಲ್ಪನಿಕ, ಸಾಮಾಜಿಕ, ಪೌರಾಣಿಕ ಕಥೆಗಳನ್ನು ಹೇಳುವ ಪ್ರೇಕ್ಷಕರನ್ನು ಬೇರೊಂದು ಜಗತ್ತಿಗೆ ಕೊಂಡೊಯ್ಯುವ ಸಾಮರ್ಥ್ಯ ರಂಗಭೂಮಿಗಿದೆ. ವೇದಿಕೆಯ ಮೇಲಿನ ಅಭಿವ್ಯಕ್ತಿ, ಹಾವಭಾವ ಮತ್ತು ವೇಷಭೂಷಣದ ಪ್ರಭಾವ, ಪಾತ್ರಗಳ ಅಭಿನಯ ಕಥೆಗಳನ್ನು ಜೀವಂತಗೊಳಿಸುತ್ತದೆ ಎಂದರು.
ಕಲಾವಿದ ಜಗದೀಶ ಮುಕಿ, ಬಸವರಾಜ ಅಡವಳ್ಳಿ, ಶರಣಯ್ಯ ಹಿರೇಮಠ, ಪ್ರಮುಖರಾದ ಬಸವರಾಜ, ವೀರೇಶ, ಎಸ್.ಜಿ. ಹರಿಜನ, ಎಸ್.ಎಚ್.ಅಡೂರ, ಪಿ.ಬಿ.ಅಡೂರ, ಎಸ್.ಬಿ.ಅಡೂರ, ಎನ್.ಎಚ್. ಹಿರೇಮಠ, ಬಸವರಡ್ಡಿ, ರಾಮಣ್ಣ ಇದ್ದರು.