ಕಾರಟಗಿಯಲ್ಲಿ ಹಮ್ಮಿಕೊಂಡಿದ್ದ ನೇತ್ರ ಶಸ್ತ್ರಚಿಕಿತ್ಸಾ ಉಚಿತ ಶಿಬಿರಕ್ಕೆ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಚಾಲನೆ ನೀಡಿದರು. ಡಾ.ಚೇತನ್, ಅರ್ಚಕ ಭೀಮೇಶಪ್ಪ ಅಪ್ಪಾಜಿ, ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಸುಂಕದ, ಗೌರವಾಧ್ಯಕ್ಷ ಶರಣಯ್ಯಸ್ವಾಮಿ ಸಾಹುಕಾರ್ ಇದ್ದರು. 
ಕೊಪ್ಪಳ

ಅಶಕ್ತರ ಬದುಕು ಭದ್ರವಾಗಿಸುವ ಕಾರ್ಯ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಅನಿಸಿಕೆ
  • 2 ದಿನಗಳ ನೇತ್ರ ಶಸ್ತ್ರಚಿಕಿತ್ಸಾ ಉಚಿತ ಶಿಬಿರಕ್ಕೆ ಚಾಲನೆ
ಕಾರಟಗಿ: ಕಳೆದ 4 ವರ್ಷಗಳಿಂದ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮೂಲಕ ನಿರಂತರವಾಗಿ ಬಡವರಿಗೆ ಆಸರೆಯಾಗಿರುವ ಕಾರ್ಯ ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಸಕ ಶಿವರಾಜ ತಂಗಡಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಸರೆ ಚಾರಿಟಬಲ್ ಟ್ರಸ್ಟ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 2 ದಿನಗಳ ನೇತ್ರ ಶಸ್ತ್ರಚಿಕಿತ್ಸಾ ಉಚಿತ ಶಿಬಿರದಲ್ಲಿ ಮಾತನಾಡಿದರು. ಸಂಘ-ಸಂಸ್ಥೆಗಳು ಸಾಮಾಜಿಕ ಸೇವೆ ಮೂಲಕ ಬಡವರು, ನೊಂದವರ ನೆರವಿಗೆ ಧಾವಿಸುವ ಮೂಲಕ ಅಶಕ್ತರ ಬದುಕನ್ನು ಭದ್ರವಾಗಿಸಿ ನೆಮ್ಮದಿ ಕಲ್ಪಿಸುತ್ತಿವೆ ಎಂದರು.
ಬೆಂಗಳೂರಿನ ವಿವೇಕಾನಂದ ಸೇವಾಶ್ರಮದ ವೈದ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ನೇತ್ರ ಶಸ್ತ್ರಚಿಕಿತ್ಸೆಯಿಂದ ಹಲವರು ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಿದೆ. ಕಣ್ಣಿನ ದೋಷಗಳಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಬದುಕಿಗೆ ಆಸರೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಅರ್ಚಕ ಭೀಮೇಶಪ್ಪ ಅಪ್ಪಾಜಿ, ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಸುಂಕದ, ಗೌರವಾಧ್ಯಕ್ಷ ಶರಣಯ್ಯಸ್ವಾಮಿ ಸಾಹುಕಾರ್, ಪುರಸಭೆ ಸದಸ್ಯ ಎಂ. ಆನಂದ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರಿಯಾಂಕಾ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಇತರರಿದ್ದರು.