ಕೊಪ್ಪಳದಲ್ಲಿ ಶುಕ್ರವಾರ ಗ್ರಾಪಂ ಕಂಪ್ಯೂಟರ್​ ಆಪರೇಟರ್​ ದಿನ ಆಚರಿಸಲಾಯಿತು. ತಾಪಂ ಇಒ ದುಂಡಪ್ಪ ತುರಾದಿ, ಸಹಾಯಕ ನಿರ್ದೇಶಕರಾದ ಮಹೇಶ ಎಚ್​., ಸೌಮ್ಯ ಕೆ., ಕಂಪ್ಯೂಟರ್​ ಆಪರೇಟರ್​ಗಳಾದ ನಿಸಾರ ಅಹಮದ್​, ಮಾರುತಿ ಹಣವಾಳ ಇದ್ದರು.  
ಕೊಪ್ಪಳ

ಗಣಕಯಂತ್ರ ನಿರ್ವಾಹಕರ ಕಾರ್ಯ ಶ್ಲಾಘನೀಯ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ದುಂಡಪ್ಪ ತುರಾದಿ ಪ್ರಶಂಸೆ
ಕೊಪ್ಪಳ: ಗ್ರಾಪಂ ಮಟ್ಟದಲ್ಲಿ ಎಲ್ಲ ಸೇವೆಗಳು ಆನ್​ಲೈನ್​ ಆಗಿವೆ. ಕಂಪ್ಯೂಟರ್​ ಆಪರೇಟರ್​ಗಳು ಎಲ್ಲವನ್ನು ನಿರ್ವಹಿಸುವ ಮೂಲಕ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಂದು ತಾಪಂ ಇಒ ದುಂಡಪ್ಪ ತುರಾದಿ ಪ್ರಶಂಸಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ಕಂಪ್ಯೂಟರ್​ ಆಪರೇಟರ್​ ದಿನಾಚರಣೆಯಲ್ಲಿ ಮಾತನಾಡಿದರು.
ಚಾರ್ಲ್ಸ್​ ಬ್ಯಾಬೇಜ್​ ಕಂಪ್ಯೂಟರ್​ ಕಂಡು ಹಿಡಿದು ನಮ್ಮೆಲ್ಲರಿಗೂ ಅನುಕೂಲ ಮಾಡಿದ್ದಾರೆ. ಇಂದು ಬಹುತೇಕ ಸೇವೆಗಳು ಕಂಪೂಟರ್​ ಆಧಾರಿತವಾಗಿ ನಡೆಯುತ್ತಿವೆ. ಜಗತ್ತನ ಎಲ್ಲ ಮಾಹಿತಿ ಗಣಕಯಂತ್ರದಲ್ಲಿ ನಮಗೆ ಕ್ಷಣ ಮಾತ್ರದಲ್ಲಿ ದೊರೆಯುತ್ತದೆ. ಗ್ರಾಮೀಣ ಮಟ್ಟದಲ್ಲಿ ಗ್ರಾಪಂನ ಸೇವೆಗಳನ್ನು ಕಂಪ್ಯೂಟರ್​ ಆಪರೇಟರ್​ಗಳು ಸಾರ್ವಜನಿಕರಿಗೆ ಮುಟ್ಟಿಸುತ್ತಿದ್ದಾರೆ. ಈ ಮೊದಲು ಕೈ ಬರಹದಲ್ಲಿ ಸೇವೆಗಳನ್ನು ನೀಡಲಾಗುತ್ತಿತ್ತು. ಈಗ ಎಲ್ಲ ಆನ್​ಲೈನ್​ ಆಗಿವೆ. ಆಪರೇಟರ್​ಗಳು ಜನಸ್ನೇಹಿಯಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಚಾರ್ಲ್ಸ್​ ಬ್ಯಾಬೇಜ್​ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಬಿಸರಳ್ಳಿ ಗ್ರಾಪಂ ಕಂಪ್ಯೂಟರ್​ ಆಪರೇಟರ್​ ನಿಸಾರ ಅಹಮದ್​ ಮತ್ತು ಮಾರುತಿ ಹಣವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪುರ ಗ್ರಾಪಂ ಡಿಇಒ ಮಂಜುಳಾ, ಹಲಗೇರಾ ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡ ಪೊಲೀಸ್​ ಪಾಟೀಲ್​, ಪಂಚಾಯತ್​ರಾಜ್​ ಸಹಾಯಕ ನಿರ್ದೇಶಕ ಮಹೇಶ ಎಚ್​., ಸಹಾಯಕ ನಿರ್ದೇಶಕಿ ಸೌಮ್ಯ ಕೆ. ಇತರರಿದ್ದರು.