ಮುನಿರಾಬಾದ್ ಸಮೀಪದ ಹಿರೇಬಗನಾಳ ಹಾಗೂ ಕುಣಿಕೇರಿಯಲ್ಲಿ ಶಾಖಾ ಅಂಚೆ ಕಚೇರಿ ಕಟ್ಟಡವನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನಾ ಗಡಾದ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಇದ್ದರು. 
ಕೊಪ್ಪಳ

ಸಿಎಸ್‌ಆರ್ ನಿಧಿ ಬಳಕೆ ಶ್ಲಾಘನೀಯ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ
  • ಅಂಚೆ ಕಚೇರಿ ಕಟ್ಟಡ ಉದ್ಘಾಟನೆ
ಮುನಿರಾಬಾದ್: ಗ್ರಾಮೀಣ ಭಾಗದ ಜನರಿಗೆ ಸುಸಜ್ಜಿತ ಅಂಚೆ ಸೇವೆ ತಲುಪಿಸಲು ಕಾರ್ಪೊರೇಟ್ ಕಂಪನಿಗಳು ಸಿಎಸ್‌ಆರ್ ನಿಧಿ ಬಳಸುತ್ತಿರುವುದು ಶ್ಲಾಘನೀಯ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಸಮೀಪದ ಹಿರೇಬಗನಾಳ ಹಾಗೂ ಕುಣಿಕೇರಿ ಗ್ರಾಮಗಳಲ್ಲಿ ಶಿಂಡಿಯಾ (ಎಕ್ಸ್-ಇಂಡಿಯಾ) ಕಂಪನಿಯ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ನಿರ್ಮಿಸಿದ ಶಾಖಾ ಅಂಚೆ ಕಚೇರಿ ಕಟ್ಟಡ ಉದ್ಘಾಟಿಸಿ ಗುರುವಾರ ಮಾತನಾಡಿದರು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನಾ ಗಡಾದ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಶಿಂಡಿಯಾ ಕಂಪನಿ ನಿರ್ದೇಶಕರು, ಸಿಬ್ಬಂದಿ ಇದ್ದರು.