ಗಂಗಾವತಿಯಲ್ಲಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ತಾಲೂಕು ಸಮಿತಿಯಿಂದ ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಾತಿಮಾ ಶೇಖ್ ಜಯಂತಿ ಆಚರಿಸಲಾಯಿತು. ಕ್ರಾಂತಿ ಚಕ್ರ ಬಳಗದ ಅಧ್ಯಕ್ಷ ಜೆ.ಭಾರದ್ವಾಜ್, ಸಂಘದ ತಾಲೂಕು ಅಧ್ಯಕ್ಷ ಚಾಂದ್‌ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೆಬೂಬಸಾಬ್ ಲಾಠಿ ಇತರರಿದ್ದರು.
ಗಂಗಾವತಿ: ನಗರದ ಬಸ್ ನಿಲ್ದಾಣ ಬಳಿ ಟಿಎಪಿಸಿಎಂಎಸ್ ಕಟ್ಟಡ ಆವರಣದಲ್ಲಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ತಾಲೂಕು ಸಮಿತಿಯಿಂದ ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಾತಿಮಾ ಶೇಖ್ ಜಯಂತಿ ಆಚರಿಸಲಾಯಿತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಕ್ರಾಂತಿ ಚಕ್ರ ಬಳಗದ ಅಧ್ಯಕ್ಷ ಜೆ.ಭಾರದ್ವಾಜ್ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ ಇಲ್ಲದ ಸಂದರ್ಭದಲ್ಲಿ ಹಲವು ನೋವುಗಳನ್ನು ಅನುಭವಿಸುವ ಮೂಲಕ ಮಹಿಳೆಯರನ್ನು ಶಿಕ್ಷಣದ ಮುಖ್ಯವಾಹಿನಿಗೆ ತಂದ ಾತಿಮಾ ಶೇಖ್ ನಿತ್ಯ ಸ್ಮರಣೀಯರು ಎಂದರು.
ಸಂಘದ ತಾಲೂಕು ಅಧ್ಯಕ್ಷ ಚಾಂದ್‌ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೆಬೂಬಸಾಬ್ ಲಾಠಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಇಬ್ರಾಹಿಂ, ತಾಲೂಕು ಕಾರ್ಯದರ್ಶಿ ನಿರುಪಾದಿ ಭೋವಿ, ಸದಸ್ಯರಾದ ಮುದ್ದೇಶಿ, ಅಬ್ಬಾಸ್ ಅಲಿ ಇತರರಿದ್ದರು.