ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಯಶಸ್ವಿ ಆಡಳಿತ ಪೂರ್ಣಗೊಳಿಸಿದ್ದಕ್ಕಾಗಿ ಜೆಡಿಎಸ್ ಯುವ ಘಟಕದಿಂದ ಗಂಗಾವತಿ ತಾಲೂಕಿನ ಪಂಪಾಸರೋವರದ ಶ್ರೀ ವಿಜಯಲಕ್ಷ್ಮಿದೇಗುಲ ಆವರಣದ ಕೋತಿಗಳಿಗೆ ಹಣ್ಣು ಹಂಪಲಗಳನ್ನು ಬುಧವಾರ ವಿತರಿಸಲಾಯಿತು. ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ, ತಾಲೂಕಾಧ್ಯಕ್ಷ ಕಷ್ಣ ನಾಯಕ, ಕಂಪ್ಲಿ ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಮೇಘರಾಜ, ವಿವಿಧ ಘಟಕಗಳ ಪದಾಧಿಕಾರಿಗಳಾದ ಹನುಮಂತಪ್ಪ ಬೇವೂರ, ರಮೇಶ ಕೋನಸಾಗರ ಇತರರಿದ್ದರು. 
ಕೊಪ್ಪಳ

ಪ್ರಧಾನ ಸೇವಕನ ಯಶಸ್ವಿ 12 ವರ್ಷ ಆಡಳಿತ ಪೂರ್ಣ

ಪ್ರಮುಖ ಮುಖ್ಯಾಂಶಗಳು

  • ನರೇಂದ್ರ ಮೋದಿ ಶ್ರೇಯಸ್ಸಿಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ
  • ಕೋತಿಗಳಿಗೆ ಹಣ್ಣು
ಗಂಗಾವತಿ: ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಯಶಸ್ವಿ ಆಡಳಿತ ಪೂರ್ಣಗೊಳಿಸಿದ್ದಕ್ಕಾಗಿ ಜೆಡಿಎಸ್ ಯುವ ಘಟಕದಿಂದ ತಾಲೂಕಿನ ಪಂಪಾಸರೋವರದ ಶ್ರೀ ವಿಜಯಲಕ್ಷ್ಮೀ ದೇಗುಲದಲ್ಲಿ ವಿಶೇಷ ಪೂಜೆ ಬುಧವಾರ ಸಲ್ಲಿಸಲಾಯಿತು.
ಮೋದಿ ಹೆಸರಿನಲ್ಲಿ ಅರ್ಚನೆ ನೆರವೇರಿಸಿದ ನಂತರ ದೇವಾಲಯ ಆವರಣದಲ್ಲಿನ ಕೋತಿಗಳಿಗೆ ಹಣ್ಣುಗಳನ್ನು ನೀಡಲಾಯಿತು. ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಮಾತನಾಡಿ, ಎಲ್ಲ ವರ್ಗದವರ ಪರ ಸಮರ್ಥನೀಯ ರೀತಿಯಲ್ಲಿ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ಮೆಚ್ಚುವ ನಾಯಕರಾಗಿದ್ದಾರೆ. ದೇಶವನ್ನು ವಿಶ್ವದ ಶ್ರೇಷ್ಟ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಸಂಕಲ್ಪ ಕೈಗೊಂಡಿದ್ದಾರೆ ಎಂದರು.
ತಾಲೂಕಾಧ್ಯಕ್ಷ ಕಷ್ಣ ನಾಯಕ, ಕಂಪ್ಲಿ ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಮೇಘರಾಜ, ವಿವಿಧ ಘಟಕಗಳ ಪದಾಧಿಕಾರಿಗಳಾದ ಹನುಮಂತಪ್ಪ ಬೇವೂರ, ರಮೇಶ ಕೋನಸಾಗರ, ನಾಗರಾಜ ನಾಯಕ, ಜಗದೀಶ ಪೂಜಾರಿ, ಪರಶುರಾಮ, ಮಲ್ಲಿಕಾರ್ಜುನ ಇತರರಿದ್ದರು.
ತಾತನ ಮಠದಲ್ಲೂ ಆಚರಣೆ: ನಗರದ ಶ್ರೀ ಚನ್ನಬಸವಸ್ವಾಮಿ ಮಠದಲ್ಲಿ ಬಿಜೆಪಿ ವಿವಿಧ ಘಟಕಗಳಿಂದಲೂ ಪ್ರಧಾನಿ ಯಶಸ್ವಿ ಆಡಳಿತಕ್ಕಾಗಿ ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಗರ ಮತ್ತು ಗ್ರಾಮೀಣ ಮಂಡಲ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಮಾಜಿ ಸಂಸದ ಎಸ್.ಶಿವರಾಮನಗೌಸ ಮಾತನಾಡಿ, ಪ್ರಧಾನಿ ಮೋದಿಗೆ ದೀರ್ಘಾಯುಷ್ಯದೊಂದಿಗೆ ಉತ್ತಮ ಆರೋಗ್ಯ ಕಲ್ಪಿಸಲು ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು. ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಪ್ರಮುಖರಾದ ಮನೋಹರಗೌಡ ಹೇರೂರು, ಚಂದ್ರು ಹಿರೂರ್, ಸೌಭಾಗ್ಯಾ, ಲಲಿತಾ, ಯಮನೂರ ಚೌಡ್ಕಿ, ವೀರೇಶ ಬಲ್ಕುಂದಿ, ಡಿ.ಕೆ.ಆಗೋಲಿ, ಪಂಪಣ್ಣನಾಯಕ ಇತರರಿದ್ದರು.