ಕೊಪ್ಪಳ ಅಶೋಕ ವೃತ್ತದ ಬಳಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿ ಸುಟ್ಟಿರುವ ಸ್ಕೂಟಿ ರಸ್ತೆ ಬದಿ ಬಿದ್ದಿರುವುದು.
- ಪ್ರತಿಭಟನೆ ವೇಳೆ ಸುಟ್ಟ ಸ್ಕೂಟಿ ಬಿಟ್ಟು ಔಟ್
- ದಹನಗೊಂಡ ವಾಹನದಿಂದ ಸಂಚಾರಕ್ಕೆ ತೊಂದರೆ
ಕೊಪ್ಪಳ: ಶಾಸಕ ರಾವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಈಚೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ವೇಳೆ ಬೆಂಕಿ ಸುಟ್ಟಿದ್ದ ಬೈಕ್ ಇನ್ನೂ ರಸ್ತೆ ಬದಿಯಲ್ಲೇ ಬಿದ್ದಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬನ್ನಿಕಟ್ಟೆಯಿಂದ ಅಶೋಕ ವೃತ್ತದವರೆಗೆ ನಡೆದ ಪಾದಯಾತ್ರೆ ವೇಳೆ ಪ್ರತಿಭಟನಾಕಾರರು ಅಶೋಕ ವೃತ್ತದಲ್ಲಿ ಟೈರ್ ಹಾಗೂ ಹಳೆಯ ಸ್ಕೂಟಿಯೊಂದನ್ನು ರಸ್ತೆಯ ಮಧ್ಯಭಾಗಕ್ಕೆ ತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ತೀವ್ರತೆಗೆ ವಾಹನ ಸ್ಫೋಟಗೊಂಡು ಕೆಲಕಾಲ ಆತಂಕದ ವಾತಾವರಣ ನಿರ್ವಾಣವಾಗಿತ್ತು. ಟನೆಯಿಂದ ಸಂಚಾರ ದಟ್ಟಣೆ ಉಂಟಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ರಸ್ತೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವುದು ಕಾನೂನುಬಾಹಿರವಾಗಿದ್ದು, ಬಳಿಕ ಅದರ ಅವಶೇಷಗಳನ್ನು ತೆರವುಗೊಳಿಸದೇ ಬಿಟ್ಟಿರುವುದು ನಿರ್ಲಕ್ಷ್ಯದ ಪರವಾವಧಿಯಾಗಿದೆ. ರಸ್ತೆ ಬದಿ ಬಿದ್ದಿರುವ ಸುಟ್ಟ ವಾಹನ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ನಗರಾಡಳಿತ ಅಥವಾ ಪ್ರತಿಭಟನೆ ಆಯೋಜಕರು ಕೂಡಲೇ ವಾಹನ ತೆರವಿಗೆ ಮುಂದಾಗಬೇಕು. ಇಂತಹ ಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.