ಹನುಮಸಾಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಹಾಲುಮತ ಸಮುದಾಯ ಸಿದ್ಧರಾಮಾನಂದಪುರಿ ಸ್ವಾಮೀಜಿಗಳ ನಿಧನಕ್ಕೆ ಸಂತಾಪ ಸೂಚಿಸಿತು. ಹಾಲುಮತ ಸಮುದಾಯದ ಗುರುಗಳಾದ ಸಿದ್ದಯ್ಯ ಗುರುವಿನ, ಹಾಲುಮತ ಸಮುದಾಯದ ಸ್ಥಳೀಯ ಅಧ್ಯಕ್ಷ ಭರಮಪ್ಪ ಬಿಂಗಿ, ಗ್ರಾಪಂ ಸದಸ್ಯರಾದ ಬಸವರಾಜ ಬಿಲ್ಕಾರ, ಬಸವರಾಜ ಅಕ್ಕಿ ಇತರರಿದ್ದರು.
ಹನುಮಸಾಗರ: ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಹಾಲುಮತ ಸಮುದಾಯವರು ಕಾಗಿನೆಲೆ ಕನಕ ಗುರು ಪೀಠದ ತಿಂಥಣಿ ಶಾಖಾಮಠದ ಪೀಠಾಪತಿ ಸಿದ್ಧರಾಮಾನಂದಪುರಿ ಸ್ವಾಮೀಜಿಗಳ ನಿಧನಕ್ಕೆ ಸಂತಾಪ ಸೂಚಿಸಿದರು.
ಗ್ರಾಪಂ ಸದಸ್ಯ ಬಸವರಾಜ ಅಕ್ಕಿ ಮಾತನಾಡಿ, ಸಿದ್ಧರಾಮಾನಂದಪುರಿ ಸ್ವಾಮಿಗಳು ಹಾಲುಮತ ಸಮುದಾಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದರು. ಅವರ ಅಗಲಿಕೆ ಹಾಲುಮತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜದ ಏಳಿಗೆಯೇ ಅವರ ಜೀವನದ ಏಕೈಕ ಉದ್ದೇಶವಾಗಿತ್ತು. ತಿಂಥಣಿಯಲ್ಲಿ ಒಂದು ಸಣ್ಣ ಕುಟೀರದಿಂದ ಪ್ರಾರಂಭವಾದ ಅವರ ಸೇವಾ ಪಥ ಇಂದು ಬೃಹತ್ ಮಟ್ಟಕ್ಕೆ ವಿಸ್ತರಿಸಿದೆ. ಸಮುದಾಯದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಅನೇಕ ಯುವಕರು ಸನ್ಮಾರ್ಗದತ್ತ ಹೆಜ್ಜೆ ಇಟ್ಟಿದ್ದಾರೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಲಿವೆ ಎಂದರು.
ಹಾಲುಮತ ಸಮುದಾಯದ ಗುರುಗಳಾದ ಸಿದ್ದಯ್ಯ ಗುರುವಿನ, ಹಾಲುಮತ ಸಮುದಾಯದ ಸ್ಥಳೀಯ ಅಧ್ಯಕ್ಷ ಭರಮಪ್ಪ ಬಿಂಗಿ, ಗ್ರಾಪಂ ಸದಸ್ಯ ಬಸವರಾಜ ಬಿಲ್ಕಾರ, ಮುಖಂಡರಾದ ಸಕ್ರಪ್ಪ ಬಿಂಗಿ, ಶರಣಪ್ಪ ಹಕ್ಕಿ, ಹನುಮಂತಪ್ಪ ಹೂಗಾರ, ಈರಗಪ್ಪ ಗಡೇಕಾರ, ಭರಮಪ್ಪ ಬಿಂಗಿ, ಹುಲಪ್ಪ ಗಡೇಕಾರ, ಕಾಳಪ್ಪ ಕುಷ್ಟಗಿ, ಹನುಮಂತ ಹಕ್ಕಿ, ಹುಲ್ಲಪ್ಪ ಹಕ್ಕಿ (ಜೆಸ್ಕಾಂ), ನಾಗರಾಜ ಸೇಬಿನಕಟ್ಟಿ ಇತರರಿದ್ದರು.