ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ, ನಿವೃತ್ತ ಶಿಕ್ಷಕರಾದ ಗಂಗಪ್ಪ ನಿರಲಕೇರಿ, ಚಂದ್ರಶೇಖರ್ ದೇವರು ಹಾಗೂ ಹಳೇ ವಿದ್ಯಾರ್ಥಿಗಳು ಇದ್ದರು. 
ಕೊಪ್ಪಳ

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ ಅಭಿಮತ
  • ಕುಷ್ಟಗಿ ಕೇಸೂರು ಗುರುವಂದನಾ ಸ್ನೇಹ ಸಮ್ಮಿಲನ
ಕುಷ್ಟಗಿ: ಗುರುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು. ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಅನನ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ ಹೇಳಿದರು.
ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2005-06ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಸಲ್ಲುವ ನಿಜವಾದ ಗೌರವ. ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ನಾಗರಿಕರಾಗಿ ಹೊರಹೊಮ್ಮಲಿ. ಗುರು-ಶಿಷ್ಯರ ಸಂಬಂಧ ಬಲಿಷ್ಠಗೊಳಿಸಲು ಇಂತಹ ಕಾರ್ಯಕ್ರಮ ಆಯೋಜನೆ ಅತ್ಯವಶ್ಯ ಎಂದರು.
ನಿವೃತ್ತ ಶಿಕ್ಷಕ ಚಂದ್ರಶೇಖರ್ ದೇವರು, ಹಳೇ ವಿದ್ಯಾರ್ಥಿಗಳಾದ ವನಜಾಶ್ರೀ ಮಳೀಮಠ, ನಾಗರಾಜ ಚವ್ಹಾಣ್, ಶರಬಣ್ಣ ಆಲ್ವಿ ಮಾತನಾಡಿದರು. ನಿವೃತ್ತ ಶಿಕ್ಷಕ ಗಂಗಪ್ಪ ನಿರಲಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರಶೇಖರ್ ಕಿರಗಿ, ಚಿದಾನಂದ ಕಸ್ತೂರಿ, ಲಕ್ಷ್ಮಣ್ ಬಾಗೇವಾಡಿ, ಕೃಷ್ಣ ಗೋಡಬೋಲೆ, ರತ್ನಾ ಕುಲಕರ್ಣಿ, ಕಸ್ತೂರಿ ಕಂಪಾಪೂರಮಠ, ಬಸನಗೌಡ ಪಾಟೀಲ್, ಪುಷ್ಪಾವತಿ ಹಿರೇಮಠ, ಅಂಬಿಕಾ ಹೊಸಮನಿ, ಹೇಮಾವತಿ ಗೋಪಾಲ್ ನಾಯಕ, ಹನುಮಂತಪ್ಪ ಪೂಜಾರ, ಶಿವಾನಂದ ಹೂಗಾರ್, ವಿಮಲಾ ನಿಡಶೇಸಿ, ನಾಗರಾಜ ನಿಡಗುಂದಿ, ವಸಂತಕುಮಾರ ಮಾಳಗಿ, ವೀರೇಶ ಕರಡಕಲ್ ಇತರರಿದ್ದರು.