ಹನುಮಸಾಗರದಲ್ಲಿ ಸಖಿ ಒನ್ ಸ್ಟಾಪ್‌ಸೆಂಟರ್ ಒಂದೇ ಸೂರಿನಡಿ ಸಮಗ್ರ ಪರಿಹಾರ ಜಾಗೃತಿ ಕಾರ್ಯಕ್ರಮದಲ್ಲಿ ಪೋಸ್ಟರ್ ಪ್ರದರ್ಶಿಸಲಾಯಿತು. ಸಖಿ ಕೇಂದ್ರ ಮುಖ್ಯಸ್ಥೆ ಯಮನಮ್ಮ ಬೇಸ್ತರ, ಪ್ರಮುಖರಾದ ಸೂಚಪ್ಪ ದೇವರಮನಿ, ಮಹಾಂತೇಶ ಗವಾರಿ, ಶಂಕರ ಸಿಡ್ಲಬಾವಿ, ಏಕನಾಥ ಮೆದಿಕೇರಿ, ಸಖಿ ಕೇಂದ್ರದ ಸಿಬ್ಬಂದಿ ಇದ್ದರು. 
ಕೊಪ್ಪಳ

ಮಹಿಳೆಯರ ರಕ್ಷಣೆ ನಮ್ಮೆಲ್ಲರ ಹೊಣೆ

ಪ್ರಮುಖ ಮುಖ್ಯಾಂಶಗಳು

  • ರಕ್ಷಣೆ
  • ಹೊಣೆ

ಮಹಿಳೆಯರ ರಕ್ಷಣೆ ನಮ್ಮೆಲ್ಲರ ಹೊಣೆ

ಹನುಮಸಾಗರ: ಮಹಿಳೆಯರು ಸಮಸ್ಯೆಗಳನ್ನು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಎಂದು ಸಖಿ ಕೇಂದ್ರ ಮುಖ್ಯಸ್ಥೆ ಯಮನಮ್ಮ ಬೇಸ್ತರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಖಿ ಒನ್ ಸ್ಟಾಪ್ ಸೆಂಟರ್ ಒಂದೇ ಸೂರಿನಡಿ ಸಮಗ್ರ ಪರಿಹಾರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ಸುರಕ್ಷತೆ, ಭದ್ರತೆ ನಮ್ಮೆಲ್ಲರ ಹೊಣೆ. ಮಕ್ಕಳು ಹಾಗೂ ಮಹಿಳೆಯರ ಗೌಪ್ಯತೆ, ಸಂರಕ್ಷಣೆ, ಆಪ್ತ ಸಮಾಲೋಚನೆ ಹಾಗೂ ತಾತ್ಕಾಲಿಕ ಆಶ್ರಯ ನೀಡಲಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ಒಂದೇ ದೂರವಾಣಿ ಕರೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಯಾವುದೇ ಮಗು, ಮಹಿಳೆ, ವಯೋವೃದ್ಧೆ, ಅಂಗವಿಕಲರಿಗೆ, ಆರೈಕೆ, ರಕ್ಷಣೆ ಅಗತ್ಯವಿದ್ದಲ್ಲಿ, ಒತ್ತಡ, ಲೈಗಿಂಕ, ವರದಕ್ಷಿಣೆ ಕಿರುಕುಳ, ದೈಹಿಕ ಹಾಗೂ ಮಾನಸಿಕ ಹಿಂಸೆಯಾದಲ್ಲಿ ಸಖಿ ದೂರವಾಣಿ ಸಂಖ್ಯೆ 181ಕ್ಕೆ ಕರೆ ಮಾಡಿ ದೂರು ನೀಡಬೇಕು ಎಂದರು.
ಪ್ರಮುಖರಾದ ಸೂಚಪ್ಪ ದೇವರಮನಿ, ಮಹಾಂತೇಶ ಗವಾರಿ, ಶಂಕರ ಸಿಡ್ಲಬಾವಿ, ಏಕನಾಥ ಮೆದಿಕೇರಿ, ಸುರೇಶ ಶಾಸ್ತ್ರೀ, ಸಿ.ಕೆ.ಶಾಸ್ತ್ರೀ, ಸಖಿ ಕೇಂದ್ರದ ಸಿಬ್ಬಂದಿ ಇದ್ದರು.