ಗಂಗಾವತಿ 16ನೇ ವಾರ್ಡ್ ಬಂಬೂ ಬಜಾರ್ ಶ್ರೀ ನಿಮಿಷಾಂಭದೇವಿಯ ದೇವಾಲಯದಲ್ಲಿ ಶ್ರೀ ನಿಮಿಷಾಂಭದೇವಿಯ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರದ ಮೆರವಣಿಗೆ ಜರುಗಿತು. ಸಂಘದ ಅಧ್ಯಕ್ಷ ತುಳಜಾರಾಂ ಕಾಂಬ್ಳೇಕರ್, ಪ್ರಮುಖರಾದ ಯಂಕಣ್ಣ ಚಿತ್ರಗಾರ, ತುಕರಾಂ ಬಿದರಕರ್, ಶ್ರೀನಿವಾಸ ಚೌವ್ಹಾಣ್ ಇತರರಿದ್ದರು. 
ಕೊಪ್ಪಳ

ಶ್ರೀ ನಿಮಿಷಾಂಭದೇವಿಯ ಮೆರವಣಿಗೆ ಅದ್ದೂರಿ

ಪ್ರಮುಖ ಮುಖ್ಯಾಂಶಗಳು

  • ಗಂಗಾಪೂಜೆ
  • ಭಾವಚಿತ್ರ
  • ಪೂರ್ಣ ಕುಂಭ
ಗಂಗಾವತಿ: ನಗರದ 16ನೇ ವಾರ್ಡ್ ಬಂಬೂ ಬಜಾರ್ ಶ್ರೀ ನಿಮಿಷಾಂಭದೇವಿಯ ದೇವಾಲಯದಲ್ಲಿ ಶ್ರೀ ನಿಮಿಷಾಂಭದೇವಿಯ ಜಯಂತ್ಯುತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ, ಶ್ರೀ ಸೋಮವಂಶ ಆರ್ಯ ಕ್ಷತ್ರೀಯ ಯುವಕ ಸಂಘ ಮತ್ತು ಮಹಿಳಾ ಮಂಡಳಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಬೆಳಗ್ಗೆ ದೇವಾಲಯದಲ್ಲಿನ ತುಳಜಾಭವಾನಿ, ಆಂಜನೇಯ ಸ್ವಾಮಿ ಮೂರ್ತಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಗಂಗಾಪೂಜೆ ನೆರವೇರಿಸಲಾಯಿತು. ಭಾವಚಿತ್ರವನ್ನು ಶ್ರೀ ಕೋಟಿ ಆಂಜನೇಯ ಸ್ವಾಮಿ ದೇವಾಲಯದಿಂದ ಪೂರ್ಣ ಕುಂಭದೊಂದಿಗೆ ಅದ್ದೂರಿ ಮೆರವಣಿಗೆ ನೆರವೇರಿಸಲಾಯಿತು.
ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ, ಅನ್ನಸಂತರ್ಪಣೆ ಮತ್ತು ಸಂಜೆ ವೇಳೆ ಪಲ್ಲಕ್ಕಿ ಜರುಗಿದವು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ಸಂಘದ ಅಧ್ಯಕ್ಷ ತುಳಜಾರಾಂ ಕಾಂಬ್ಳೇಕರ್, ಪ್ರಮುಖರಾದ ಯಂಕಣ್ಣ ಚಿತ್ರಗಾರ, ತುಕರಾಂ ಬಿದರಕರ್, ಶ್ರೀನಿವಾಸ ಚೌವ್ಹಾಣ್, ರಾಜಗೋಪಾಲ ಚೌವ್ಹಾಣ್, ಲಕ್ಷ್ಮಣರಾವ್, ಉಮೇಶ ಚಿತ್ರಗಾರ, ಮಾರುತಿ ಚಿತ್ರಗಾರ, ಕಾಶೀನಾಥ ಚಿತ್ರಗಾರ,ರುಕ್ಮಮ್ಮ ರೇಣುಕಮ್ಮ, ಪದ್ಮಾವತಿ ಕಾಂಬ್ಳೇ, ಇಂದುಮತಿ ಬಿದರಕರ್, ನಿರ್ಮಲಬಾಯಿ ಚೌವ್ಹಾಣ್, ಸಂದೀಪ, ಅಂಬಾಜಿರಾವ್ ಚೌವ್ಹಾಣ್ ಇತರರಿದ್ದರು.