ವಿಮುಕ್ತ ದೇವದಾಸಿ ಮಕ್ಕಳ ಪರದಾಟ
- ವಿಮುಕ್ತ ದೇವದಾಸಿ ಮಕ್ಕಳ ಪರದಾಟ
- ಅನುದಾನದ ನಿರೀಕ್ಷೆಯಲ್ಲಿ ಅರ್ಜಿದಾರರು
ದೇವದಾಸಿ ಪದ್ಧತಿಯಿಂದ ಶೋಷಣೆಗೊಳಗಾದ ಮಹಿಳೆಯರ ಮಕ್ಕಳ ಬದುಕಿಗೆ ಆಸರೆಯಾಗಬೇಕಿದ್ದ ಮದುವೆ ಪ್ರೋತ್ಸಾಹಧನ ಯೋಜನೆ ಸದ್ಯ ಜಿಲ್ಲೆಯಲ್ಲಿ ಕುಂಟುತ್ತಾ ಸಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸಲ್ಲಿಕೆಯಾದ ನೂರಾರು ಅರ್ಜಿಗಳು ಬಾಕಿ ಉಳಿದಿದ್ದು, ಅರ್ಜಿದಾರರು ಪ್ರೋತ್ಸಾಹ ಧನಕ್ಕಾಗಿ ಚಾತಕ ಪಯಂತೆ ಕಾಯುತ್ತಿದ್ದಾರೆ.
ಸಾಮಾಜಿಕ ಪಿಡುಗಿಗೆ ಬಲಿಯಾದ ದೇವದಾಸಿಯರು ಮತ್ತವರ ಕುಟುಂಬದವರ ಪುನರ್ವಸತಿಗಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಎರಡು ಬಾರಿ ಸರ್ವೇ ನಡೆಸಿದ್ದು, ಇತ್ತೀಚೆಗೆ ಮತ್ತೊಮ್ಮೆ ಸಮೀೆ ನಡೆಸಿ ವಿಮುಕ್ತ ದೇವದಾಸಿಯರ ಮಾಹಿತಿ ಕಲೆಹಾಕಲಾಗುತ್ತಿದೆ. ದುರ್ದೈವವೆಂದರೆ ವಿಮುಕ್ತ ದೇವದಾಸಿಯರ ಮಕ್ಕಳು ಎಲ್ಲರಂತೆ ಮದುವೆಯಾಗಿ ಸಾಮಾಜಿಕವಾಗಿ ಬಾಳಲೆಂದು ಪ್ರೋತ್ಸಾಹ ನೀಡುತ್ತಿದೆ. ಅದಕ್ಕಾಗಿ ಮದುವೆ ಪ್ರೋತ್ಸಾಹಧನ ಯೋಜನೆ ಜಾರಿಗೊಳಿಸಿದೆ.
ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 312 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಕೇವಲ 174 ಅರ್ಜಿದಾರರಿಗೆ ಮಾತ್ರ ಹಣ ಪಾವತಿಯಾಗಿದೆ. ಇನ್ನು 138 ಅರ್ಜಿದಾರರಿಗೆ ಈವರೆಗೂ ಅನುದಾನ ಕೈ ಸೇರಿಲ್ಲ. ಆಯಾ ವರ್ಷ ಅರ್ಜಿ ಸಲ್ಲಿಸಿದವರಿಗೆ ಅದೇ ವರ್ಷವೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಅನುದಾನ ಬಂದಂತೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಬಿಡುಗಡೆ ಮಾಡಿರುವುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ, ಅಧಿಕಾರಿಗಳು ತಾರತಮ್ಯ ಅನುಸರಿಸುತ್ತಿದ್ದಾರೆಂಬುದು ಅರ್ಜಿದಾರರ ಅಳಲು. ಕಳೆದ ಮೂರು ವರ್ಷದ ಅರ್ಜಿ ವಿಲೇವಾರಿ, ಅನುದಾನ ಹಂಚಿಕೆ ವಿವರ ತುಲನೆ ಮಾಡಿದಾಗ ಅಧಿಕಾರಿಗಳ ಕಳ್ಳಾಟ ಗಮನಕ್ಕೆ ಬರುತ್ತದೆ.
ಅನುದಾನ ಹಂಚಿಕೆ ವಿವರ
ಯೋಜನೆಯಡಿ 2023-24 ರಲ್ಲಿ 131 ಅರ್ಜಿಗಳು ಸಲ್ಲಿಕೆಯಾಗಿದ್ದು, 32 ಅರ್ಜಿದಾರರಿಗೆ 1.20 ಕೋಟಿ ರೂ. ನೀಡಲಾಗಿದೆ. 2024-25 ರಲ್ಲಿ ಸಲ್ಲಿಕೆಯಾದ 101 ಅರ್ಜಿಗಳಲ್ಲಿ 63 ಲಾನುಭವಿಗಳಗೆ 2.55 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. 2025-&26ರಲ್ಲಿ 80 ಅರ್ಜಿಗಳು ಬಂದಿದ್ದು, 79 ಅರ್ಜಿದಾರರಿಗೆ 3.20 ಕೋಟಿ ಅನುದಾನ ಪಾವತಿಯಾಗಿದೆ. ಅನುದಾನ ಬಳಕೆ ವಿವರ ಗಮನಿಸಿದರೆ ಹಳೆಯ ಅರ್ಜಿಗಳನ್ನು ಹಾಗೆ ಬಿಟ್ಟು ಅಧಿಕಾರಿಗಳನ್ನು ಗಮನಿಸುವ ಅರ್ಜಿದಾರರಿಗೆ ಮಾತ್ರ ಪ್ರೋತ್ಸಾಹ ಧನ ಪಾವತಿ ಮಾಡಲಾಗದೆಯಾ ಎಂಬ ಅನುಮಾನ ಮೂಡಿಸುತ್ತಿದೆ.
ಬಾಕಿ ಇದೆ 5.5 ಕೋಟಿ ರೂ.
ದೇವದಾಸಿ ಮಕ್ಕಳ ಪುನರ್ವಸತಿ ಮತ್ತು ಘನತೆಯ ಬದುಕಿಗಾಗಿ ಸರ್ಕಾರ ದೇವದಾಸಿ ಮಹಿಳೆಯ ಮಗಳ ಮದುವೆಗೆ ರೂ. 5 ಲಕ್ಷ. ದೇವದಾಸಿ ಮಹಿಳೆಯ ಮಗನ ಮದುವೆಗೆ ರೂ. 3 ಲಕ್ಷ. ಇದರೊಂದಿಗೆ ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೂ ಪ್ರತ್ಯೇಕ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಬಾಕಿ ಅರ್ಜಿದಾರರಿಗೆ ಇನ್ನು 5.5 ಕೋಟಿ ರೂ. ಅನುದಾನ ಅವಶ್ಯವಿದೆ. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಪ್ರೋತ್ಸಾಹಧನ ಪಾವತಿಸಬೇಕಿದೆ.
ಸರ್ಕಾರ ಕಾಲ ಮಿತಿಯಲ್ಲಿ ಸರಿಯಾದ ಅನುದಾನ ನೀಡಬೇಕು. ಆಯಾ ವರ್ಷದಲ್ಲಿ ಬಂದಿರುವ ಎಲ್ಲಾ ಅರ್ಜಿಗಳಿಗೆ ಅದೇ ವರ್ಷಕ್ಕೆ ಅರ್ಜಿದಾರರಿಗೆ ಪ್ರೋತ್ಸಾಹ ಧನ ಪಾವತಿಯಾಗಬೇಕು. ಆದಷ್ಟು ಬೇಗ ಬಾಕಿ ಉಳಿದ 138 ಅರ್ಜಿಗಳಿಗೆ ಹಣ ಪಾವತಿಸುವಲ್ಲಿ ಅಧಿಕಾರಿಗಳು ಆಸಕ್ತಿ ತೋರಬೇಕು.
ಅನುದಾನ ಬಂದಾಗಲೇಲ್ಲ ಹಿಂದಿನ ವರ್ಷದಲ್ಲಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಮೊದಲು ಬಂದಿರುವ ಅರ್ಜಿದಾರರಿಗೆ ಹಣ ಪಾವತಿ ಮಾಡುತ್ತಿದ್ದವೆ. ಸರ್ಕಾರದಿಂದ ನಮಗೆ ಇನ್ನು ಸಾಕಷ್ಟು ಅನುದಾನ ಬರಬೇಕಿದೆ. ಈಗಾಗಲೆ ಅನುದಾನ ಕೋರಿ ಪತ್ರ ಬರೆದಿದ್ದೇವೆ.