ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸಂಪೂರ್ಣವಾಗಿ ಶಿಥಿಲಗೊಂಡು ಕಂಬಗಳು ಬಾಗಿರುವುದು. 
ಕೊಪ್ಪಳ

ವಿದ್ಯುತ್ ಪರಿವರ್ತಕ ಸಂಪೂರ್ಣ ಶಿಥಿಲ

ಪ್ರಮುಖ ಮುಖ್ಯಾಂಶಗಳು

  • ಸಂಪೂರ್ಣ ಶಿಥಿಲ

ವಿದ್ಯುತ್ ಪರಿವರ್ತಕ ಸಂಪೂರ್ಣ ಶಿಥಿಲ

ಯಲಬುರ್ಗಾ: ತಾಲೂಕಿನ ಬಂಡಿಹಾಳ ಗ್ರಾಮದ ಜನನಿಬೀಡ ಪ್ರದೇಶದಲ್ಲಿ ಟ್ರಾನ್ಸ್ ಫಾರ್ಮಾರ್ ಕಂಬಗಳು ಶಿಥಿಲಗೊಂಡು ಬಾಗಿವೆ
ಇದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಇದೆ. ಮಕ್ಕಳು ಅದರ ಪಕ್ಕದಲ್ಲೆ ಓಡಾಡುತ್ತಾರೆ. ಹತ್ತಿರದಲ್ಲೆ ಗ್ರಾಮಕ್ಕೆ ಶುದ್ಧ ಕುಡಿವ ನೀರು ಪೂರೈಸುವ ಘಟಕ ಇದೆ. ನೀರಿಗಾಗಿ ಬರುವ ಗ್ರಾಮಸ್ಥರು ಈ ಕಂಬದ ಪಕ್ಕದಲ್ಲೆ ನಿಲ್ಲುತ್ತಾರೆ. ಆದ್ದರಿಂದ ಅನಾಹುತ ಸಂಬಂವಿಸುವ ಮುಂಚೆ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಟಿಸಿಗೆ ಇರುವ ಪ್ಯೂಜ್ ಕೆಳಮಟ್ಟದಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಜೆಸ್ಕಾಂ ಇಲಾಖೆಯವರ ಗಮನಕ್ಕೆ ಸಾಕಷ್ಟು ಬಾರಿ ತಂದರು ಕ್ರಮಕೈಗೊಂಡಿಲ್ಲ. ಕೂಡಲೇ ಟ್ರಾನ್ಸ್ ಫಾರ್ಮ್‌ರ್ ಸರಿಪಡಿಸಿ ಎಲ್ಲವಾದರೆ ಅನಾಹುತಕ್ಕೆ ಜೆಸ್ಕಾಂ ಇಲಾಖೆ ನೇರ ಹೋಣೆಯಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.