ಸಿದ್ದಾಪುರದ ಗ್ರಾಪಂ ಕಚೇರಿಯಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶಿವಗಂಗಾ, ಸಿಬ್ಬಂದಿ ಸ್ವಪ್ನಾ, ಪ್ರಮುಖರಾದ ಚನ್ನಮಲ್ಲಯ್ಯ ಸ್ವಾಮಿ, ಜಗದೀಶ್ ಸ್ವಾಮಿ ಮಂಡಲಗಿರಿ, ವೀರೇಶ್ ಗಿಂಡಿಮಠ ಇದ್ದರು. 
ಕೊಪ್ಪಳ

ತತ್ವಾದರ್ಶಗಳು ಇಂದಿಗೂ ಪ್ರಸ್ತುತ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ರೇಣುಕಾಚಾರ್ಯ

ತತ್ವಾದರ್ಶಗಳು ಇಂದಿಗೂ ಪ್ರಸ್ತುತ

ಸಿದ್ದಾಪುರ: ರೇಣುಕಾಚಾರ್ಯರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಸ್ವಾಮಿ ಹಿರೇಮಠ ಹೇಳಿದರು.
ಇಲ್ಲಿನ ಗ್ರಾಪಂ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಣುಕಾಚಾರ್ಯರು ಮಾನವೀಯ ಮೌಲ್ಯಗಳನ್ನು ಬೋಧಿಸಿ, ಸನ್ಮಾರ್ಗದಲ್ಲಿ ನಡೆಯುವಂತೆ ಸಾರಿದ್ದಾರೆ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದರು.
ಗ್ರಾಪಂ ಅಧ್ಯಕ್ಷೆ ಶಿವಗಂಗಾ, ಸಿಬ್ಬಂದಿ ಸ್ವಪ್ನಾ, ಪ್ರಮುಖರಾದ ಚನ್ನಮಲ್ಲಯ್ಯ ಸ್ವಾಮಿ, ಜಗದೀಶ್ ಸ್ವಾಮಿ ಮಂಡಲಗಿರಿ, ವೀರೇಶ್ ಗಿಂಡಿಮಠ, ಪಂಚಾಕ್ಷರಿ, ಅಭಿಷೇಕ, ಮಹಮ್ಮದ್ ಮಾನ್ವಿ, ಕನಕಪ್ಪ ಹುನೂರು, ಮಂಜುನಾಥ, ಸೋಮಶೇಖರ್ ಇತರರಿದ್ದರು.