ಕಳೆದ 19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕೊಲೆ ಆರೋಪಿಯನ್ನು ಕನಕಗಿರಿ ಪೊಲೀಸರಾದ ಬಸವರಾಜ, ಮೌಲಾಲಿ, ಯೋಗೀಶ ಬೆಂಗಳೂರಿನಲ್ಲಿ ಬಂಧಿಸಿ ಬುಧವಾರ ಗಂಗಾವತಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. 
ಕೊಪ್ಪಳ

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • 19 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸೆರೆ
  • ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಕನಕಗಿರಿ: ಕಳೆದ 19 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಸ್ಥಳೀಯ ಪೊಲೀಸರು ಬುಧವಾರ ಬೆಂಗಳೂರಿನಲ್ಲಿ ಬಂಧಿಸಿ ಗಂಗಾವತಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲೂಕಿನ ಬೈಲಕ್ಕುಂಪುರ ಗ್ರಾಮದ ಪರಶುರಾಮ 2004ರಲ್ಲಿ ತನ್ನ ಪತ್ನಿಯೊಂದಿಗೆ ಮಲಗಿದ್ದ ದುರುಗಪ್ಪ ನಾಯಕ ಎಂಬಾತನಿಗೆ ಚಾಕುವಿನಿಂದ ಚುಚ್ಚು ಕೊಂದಿದ್ದಲ್ಲದೇ, ತನ್ನ ಪತ್ನಿಗೂ ಚಾಕುವಿನಿಂದ ಇರಿದಿದ್ದನು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಆರೋಪಿ ಪತ್ನಿ ಪಾರ್ವತೆಮ್ಮ ಪತಿ ವಿರುದ್ಧವೇ ಕೊಲೆ ಹಾಗೂ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು.
ನಂತರ ಪರಶುರಾಮನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 2006ರ ಜನವರಿ 31ರವರೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಪರಶುರಾಮನು, ನಂತರ ತಲೆ ಮರಿಸಿಕೊಂಡಿದ್ದನು. ಹೀಗಾಗಿ ನ್ಯಾಯಾಲಯವು ಈ ಕೇಸನ್ನು 2007ರ ಜ.31ರಿಂದ ಎಲ್‌ಪಿಆರ್ ಎಂದು ಪರಿಗಣಿಸಿತ್ತು.
ಇದೀಗ ಇಲ್ಲಿನ ಪೊಲೀಸರು ಬೆಂಗಳೂರಿನ ದೇವನಹಳ್ಳಿಯಲ್ಲಿ ಆರೋಪಿ ಪರಶುರಾಮನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.