ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್‌ನಲ್ಲಿ ಶಿವಶರಣರಾದ ಶ್ರೀ ಬೆಟ್ಟದಜ್ಜ ಮತ್ತು ಲಿಂಗಜ್ಜ ದೇವಾಲಯದ ಜಾತ್ರೋತ್ಸವದ ನಿಮಿತ್ತ ದೇವಾಲಯದ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಪ್ರಮುಖರಾದ ಮಠದ ಲಿಂಗಪ್ಪ, ಸಿದ್ದನಗೌಡ ಇತರರಿದ್ದರು.
ಬೆಟ್ಟದಜ್ಜ, ಲಿಂಗಜ್ಜ ಜೋಡು ತೇರು ಜೋರು
ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್‌ನಲ್ಲಿ ಶಿವಶರಣರಾದ ಶ್ರೀ ಬೆಟ್ಟದಜ್ಜ ಮತ್ತು ಲಿಂಗಜ್ಜ ದೇವಾಲಯದ ಜಾತ್ರೋತ್ಸವದ ನಿಮಿತ್ತ ಬುಧವಾರ ಜೋಡು ರಥೋತ್ಸವ ಜರುಗಿತು.
ಮಾ.1ರಂದು ಪಲ್ಲಕ್ಕಿ ಉತ್ಸವ, ಭಜನೆ, ಮಾ.11ರಂದು ಬೆಳಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿಸಲಾಯಿತು.
9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಂಜೆ ಅಪಾರ ಭಕ್ತರ ನಡುವೆ ಸರ್ವಾಲಂಕೃತ ಜೋಡು ರಥೋತ್ಸವ ಜರುಗಿತು. ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಧಾರ್ಮಿಕ ಮತ್ತು ಆಧ್ಯತ್ಮಿಕ ಚಟುವಟಿಕೆಗಳು ಸಮಾಜದ ಸ್ವಾಸ್ಥ್ಯ ಕಾಪಾಡಲಿವೆ ಎಂದರು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ದೇವಾಲಯ ಸಮಿತಿಯ ಎಂ.ಲಿಂಗಪ್ಪ, ಬೆಟ್ಟಪ್ಪ, ದೊಡ್ಡಬಸವರಾಜ, ಎಂ.ಶಶಿಕುಮಾರ, ಎಂ.ಮಹೇಶ, ಪ್ರಮುಖರಾದ ಮಠದ ಲಿಂಗಪ್ಪ, ಮನೋಹರಗೌಡ ಹೇರೂರು, ಗಾದಿಲಿಂಗಪ್ಪ, ಆನಂದಗೌಡ, ಚಂದ್ರೇಗೌಡ, ಸಿದ್ದನಗೌಡ, ಸಂಗಮೇಶ ಇತರರಿದ್ದರು.