ಅಳವಂಡಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಪ್ರಮುಖರಾದ ವೆಂಕರೆಡ್ಡಿ, ನಿಂಗರೆಡ್ದಿ, ಬಸವರಡ್ದೆಪ್ಪ, ಈಶಣ್ಣ, ಮಂಜುನಾಥಗೌಡ ಇತರರಿದ್ದರು. 
ಕೊಪ್ಪಳ

ದಾಸೋಹದ ಪರಿಕಲ್ಪನೆ ತಿಳಿಸಿದ ತಾಯಿ

ಪ್ರಮುಖ ಮುಖ್ಯಾಂಶಗಳು

  • ಪರಿಕಲ್ಪನೆ

ದಾಸೋಹದ ಪರಿಕಲ್ಪನೆ ತಿಳಿಸಿದ ತಾಯಿ

ಅಳವಂಡಿ: ಶಿವನನ್ನೇ ಮನೆಗೆ ಕರೆಸಿಕೊಂಡ ಭಕ್ತಿಯ ಶಕ್ತಿ ಹೇಮರಡ್ಡಿ ಮಲ್ಲಮ್ಮ ಎಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕರೆಡ್ಡಿ ಕಲಾದಗಿ ಹೇಳಿದರು.
ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾಸೋಹ ಪರಿಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ ಮಹಾತಾಯಿ. ಸಂಕಲ್ಪ ಶಕ್ತಿ, ಏಕನಿಷ್ಟೆಯ ಲೋಕ ಪೂಜೆಯ ಶರಣೆ ಮಲ್ಲಮ್ಮ. ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ಹೆಣ್ಣಿನ ಮಹತ್ವವನ್ನು ವಿಶ್ವಕ್ಕೆ ಸಾರಿದ್ದಾಳೆ ಎಂದರು.
ಪ್ರಮುಖರಾದ ವೆಂಕರೆಡ್ಡಿ ಕಲಾದಗಿ, ನಿಂಗರೆಡ್ದಿ, ಬಸವರಡ್ಡೆಪ್ಪ ಹಳ್ಳಿಕೇರಿ, ಈಶಣ್ಣ ಗದ್ದೀಕೇರಿ, ಗುರು ಬಸವರಾಜ, ಶ್ರೀನಿವಾಸ, ಯಲ್ಲರೆಡ್ಡಿ, ಕುಬೇರಪ್ಪ, ವಸಂತ, ಮಂಜುನಾಥಗೌಡ, ನಿಂಗರೆಡ್ಡಿ, ರಾಘು, ಮಹೇಶ, ಗವಿಸಿದ್ದಪ್ಪ, ಆನಂದರಡ್ಡಿ, ನಿಂಗನಗೌಡ, ಅಂದಪ್ಪ ಇತರರಿದ್ದರು.