ಶ್ರೀರಾಮನಗರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿ ಕಾರ್ಯಾಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ್ ಶುಕ್ರವಾರ ಉದ್ಘಾಟಿಸಿದರು. ತಹಸೀಲ್ದಾರ್ ಯು.ನಾಗರಾಜ್, ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸೆ ್ಥಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಇತರರಿದ್ದರು. 
ಕೊಪ್ಪಳ

ಹಕ್ಕುಗಳ ರಕ್ಷಣೆಗೆ ಕಾಯ್ದೆ ಬಲ

ಗಂಗಾವತಿ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆಗಳಿದ್ದು, ಸಭೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ್ ಹೇಳಿದರು.
ತಾಲೂಕಿನ ಶ್ರೀರಾಮನಗರದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸೆ ್ಥ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ಜಾಗೃತಿ ಮೂಡಿಸಲಾಗುತ್ತಿದ್ದು, ಮರಳಿ ಶಾಲೆಗೆ ಸೇರಿಸಲಾಗುವುದು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಷೇಧಿಸಲಾಗಿದ್ದು, ಪ್ರೇರಣೆ ನೀಡಿದವರ ವಿರುದ್ಧ ಕ್ರಮವಾಗಲಿದೆ ಎಂದರು.
ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಪ್ರತಿ ಮಗುವಿಗೂ ಹಕ್ಕುಗಳು ಮತ್ತು ಸೌಲಭ್ಯಗಳು ದೊರೆಯಬೇಕಿದ್ದು, ಶೈಕ್ಷಣಿಕವಾಗಿ ಬಲಗೊಳ್ಳಲು ಅವಕಾಶವಿದೆ. ಶಾಲೆಯ ಮಗುವಿಗೆ ಮಾನಸಿಕ, ಶೈಕ್ಷಣಿಕ ಮತ್ತು ವತ್ತಿಪರ ಮಾರ್ಗದರ್ಶನ ನೀಡಿ ಅವರ ಭವಿಷ್ಯ ರೂಪಿಸಲು ಅನುಕೂಲವಾಗುವಂತೆ ಮಾರ್ಗದರ್ಶಕರನ್ನು ನೇಮಿಸಲಾಗುವುದು ಎಂದರು. ಮಕ್ಕಳ ಹಕ್ಕುಗಳು ಜಾರಿಗೆ ಬಂದ ವರ್ಷ, ಮಕ್ಕಳ ಹಕ್ಕುಗಳ ಉಪಯೋಗಗಳು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ನಿಷೇಧ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ, ಮಕ್ಕಳ ಸಹಾಯವಾಣಿ ಕಾರ್ಯ, ಲೈಂಗಿಕ, ಮಾನಸಿಕ ಕಿರುಕುಳ, ಸ್ವರಕ್ಷಣೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು.
ತಹಸೀಲ್ದಾರ್ ಯು.ನಾಗರಾಜ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಮಹಾಂತಸ್ವಾಮಿ ಪೂಜಾರ, ರವಿಕುಮಾರ, ಬಿಇಒ ನಟೇಶ, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ವಿರೂಪಾಕ್ಷಯ್ಯಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಸಂಗಪ್ಪ ಜೈನಾಪುರ, ಬಿಸಿಎಂ ಇಲಾಖೆ ವಿಸ್ತೀಣಾಧಿಕಾರಿ ಶಿವಶಂಕರ, ಗ್ರಾಮೀಣ ಪಿಐ ರಂಗಪ್ಪ ದೊಡ್ಡಮನಿ, ವೈದ್ಯಾಧಿಕಾರಿ ವಿನಾಯಕ್, ಪಿಡಿಒ ನಾಗೇಶ ಕುರ್ಡಿ, ಸಂಸ್ಥೆ ಸಿಇಒ ನರೇಶ, ಉಸ್ತುವಾರಿ ಜಿ.ನಾಗೇಶ್ವರರಾವ್, ಪ್ರಾಚಾರ್ಯರಾದ ಜಗನ್ನಾಥರಾವ್, ಕಷ್ಣವೇಣಿ, ಉಪ ಪ್ರಾಚಾರ್ಯೆ ಜೆ.ಲಕ್ಷ್ಮೀ, ಪದವಿ ಕಾಲೇಜಿನ ಪ್ರಾಚಾರ್ಯ ಡಿ.ಅಭಿಷೇಕ ಇತರರಿದ್ದರು.