ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಭಕ್ತರು 10ಕ್ವಿಂಟಾಲ್​ ಹುಣಸೆ ಚಟ್ನಿ ಸಿದ್ಧಪಡಿಸುತ್ತಿರುವುದು.  
ಕೊಪ್ಪಳ

ದಾಸೋಹಕ್ಕೆ ಹರಿದು ಬರುತ್ತಿರುವ ದವಸ-ಧಾನ್ಯ

ಪ್ರಮುಖ ಮುಖ್ಯಾಂಶಗಳು

  • ದಾಸೋಹಕ್ಕೆ ಹರಿದು ಬರುತ್ತಿರುವ ದವಸ-ಧಾನ್ಯ
  • ಗವಿಮಠ ಮಹಾದಾಸೋಹ
ಕೊಪ್ಪಳ: ಶ್ರೀ ಗವಿಮಠ ಮಹಾದಾಸೋಹಕ್ಕೆ ಭಕ್ತರು ದವಸ&ಧಾನ್ಯ ಅರ್ಪಿಸುವುದು ಮುಂದುವರೆದಿದ್ದು ಬುಧವಾರ ಅನೇಕ ಭಕ್ತರು ವಿವಿಧ ಆಹಾರ ಪದಾರ್ಥ ಅರ್ಪಿಸಿದರು.
ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಭಕ್ತರು 15 ಸಾವಿರ ರೊಟ್ಟಿ, 7 ಪ್ಯಾಕೇಟ್​ ಅಕ್ಕಿಮ 58 ಚೀಲ ಮೆಕ್ಕೆಜೋಳ, 2 ಚೀಲ ಭತ್ತ ಹಾಗೂ 10 ಕ್ವಿಂಟಾಲ್​ ಹುಣಸೆ ಚಟ್ನಿ ಸಲ್ಲಿಸಿದರು. ಕಲಬುರ್ಗಿ ಜಿಲ್ಲೆಯ ಹಾಗರಗುಂಡಿಗಿ ಗ್ರಾಮದ ಭಕ್ತರು 40 ಕ್ವಿಂಟಾಲ್​ ತೊಗರಿ ಬೇಳೆ ಅರ್ಪಿಸಿದರು. ಕಳೆದ ವರ್ಷ 40 ಕ್ವಿಂಟಾಲ್​ ಶೇಂಗಾ ಚಟ್ನಿ ಸಲ್ಲಿಸಿದ್ದರು. ದೇಣಿಗೆ ಅರ್ಪಿಸಿದ ಭಕ್ತರಿಗೆ ಶ್ರೀಗಳು ಆಶೀರ್ವದಿಸಿದರು.