ಅಳವಂಡಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಶ್ರೀ ಮರುಳಾಧ್ಯ ಶಿವಾಚಾರ್ಯರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಗೌಡ ಪಾಟೀಲ್, ಪ್ರಮುಖರಾದ ಶ್ರೀನಿವಾಸ ಕಲಾದಗಿ, ಬಸವರೆಡ್ಡಿ ರಡ್ಡೆರ, ನಝರುದ್ದಿನ, ಇಸ್ಮಾಯಿಲ್, ಹನುಮಂತ ಮೂಲಿಮನಿ, ತೋಟಯ್ಯ, ಪ್ರಕಾಶ, ಮಲ್ಲಪ್ಪ, ಸತೀಶ ಜಾಣಗಾರ, ಶಿವಪ್ಪ ಬಳಿಗಾರ, ಗೋವಿಂದಪ್ಪ ಸುಣಗಾರ, ರಮೇಶ ಸುಣಗಾರ, ಸಿದ್ಲಿಂಗಪ್ಪ ಬಾರಕೆರ, ಪ್ರಶಾಂತ ಸುಣಗಾರ ಇತರರಿದ್ದರು. 
ಕೊಪ್ಪಳ

ವಚನಗಳ ಸಾರ ಸರ್ವಕಾಲಕ್ಕೂ ಪ್ರಸ್ತುತ

ಪ್ರಮುಖ ಮುಖ್ಯಾಂಶಗಳು

  • ವಚನಗಳ ಸಾರ
  • ಅಂಬಿಗರ ಚೌಡಯ್ಯ

ವಚನಗಳ ಸಾರ ಸರ್ವಕಾಲಕ್ಕೂ ಪ್ರಸ್ತುತ

ಅಳವಂಡಿ: ನಿಜಶರಣ ಅಂಬಿಗರ ಚೌಡಯ್ಯ ಅವರ ತತ್ವಗಳು, ವಚನಗಳ ಸಾರ ಸರ್ವಕಾಲಕ್ಕೂ ಪ್ರಸ್ತುತ ಎಂದು ಶ್ರೀ ಮರುಳಾಧ್ಯ ಶಿವಾಚಾರ್ಯರು ಹೇಳಿದರು.
ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮಸ್ಥರಿಂದ ಗುರುವಾರ ಹಮ್ಮಿಕೊಂಡಿದ್ದ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳು, ಮೌಢ್ಯತೆ ವಿರುದ್ಧ ಹೋರಾಡಿದ ಚೌಡಯ್ಯ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಗೌಡ ಪಾಟೀಲ್ ಮಾತನಾಡಿ, ಅಂಬಿಗರ ಚೌಡಯ್ಯ ಅವರ ತತ್ವಾದರ್ಶಗಳು ಬದುಕಿಗೆ ದಾರಿದೀಪ ಎಂದರು. ಮಹಿಳೆಯರ ಕಳಶ, ಕುಂಭ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಚೌಡಯ್ಯ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.