ಶಿವಶಾಂತವೀರ ನಗರದ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನದಲ್ಲಿನ ದಿ. ಡಾ. ಬಾಬು ಜಗಜೀವನ ರಾಮ್​ ಅವರ ಪುತ್ಥಳಿಗಳಿಗೆ ಡಿಸಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ ಹಾಗೂ ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. 
ಕೊಪ್ಪಳ

ದಿ. ಡಾ. ಬಾಬು ಜಗಜೀವನ ರಾಮ್​ ಪುಣ್ಯಸ್ಮರಣೆ

ಪ್ರಮುಖ ಮುಖ್ಯಾಂಶಗಳು

  • ಮಹನೀಯರ ಪುತ್ಥಳಿಗಳಿಗೆ ಜಿಲ್ಲಾಡಳಿತದಿಂದ ಮಾಲಾರ್ಪಣೆ
ಕೊಪ್ಪಳ : ಹಸಿರು ಕ್ರಾಂತಿಯ ಹರಿಕಾರರು ಹಾಗೂ ಮಾಜಿ ಉಪಪ್ರಧಾನಿಗಳಾದ ದಿ. ಡಾ. ಬಾಬು ಜಗಜೀವನ ರಾಮ್​ ಅವರ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಕೊಪ್ಪಳ ನಗರದಲ್ಲಿ ಜಿಲ್ಲಾಡಳಿತದಿಂದ ಗೌರವ ನಮನ ಸಲ್ಲಿಸಲಾಯಿತು.
ನಗರದ ಹೊಸಪೇಟೆ ರಸ್ತೆಯ ಶಿವಶಾಂತವೀರ ನಗರದ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನದಲ್ಲಿನ ಡಾ. ಬಿ.ಆರ್​. ಅಂಬೇಡ್ಕರ್​, ಬಸವೇಶ್ವರ ಹಾಗೂ ದಿ. ಡಾ. ಬಾಬು ಜಗಜೀವನ ರಾಮ್​ ಅವರ ಪುತ್ಥಳಿಗಳಿಗೆ ಡಿಸಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ ಹಾಗೂ ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕೊಪ್ಪಳ ತಹಶೀಲ್ದಾರ್​ ಬಸವರಾಜ ತನ್ನಳ್ಳಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇತರರಿದ್ದರು.