ಕುಕನೂರು ತಾಲೂಕು ತಳಕಲ್ ಗ್ರಾಪಂನಲ್ಲಿ ಎಸ್‌ಆರ್‌ಐ ಮತದಾರರ ಕರಡು ಪ್ರತಿಗೆ ಅನುಮೋದನೆಯ ಗ್ರಾಮಸಭೆಯಲ್ಲಿ ತಾಪಂ ಯೋಜನಾಧಿಕಾರಿ ಆನಂದ ಗರೂರು ಮಾತನಾಡಿದರು. ಪಿಡಿಒ ವೀರನಗೌಡ ಚೆನ್ನವೀರನಗೌಡ, ತಾಪಂ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಇದ್ದರು. 
ಕೊಪ್ಪಳ

ನೈಜ-ಕಡ್ಡಾಯ ಮತದಾನದಿಂದ ದೇಶದ ಪ್ರಗತಿ

ನರೇಶ್ ಕುಮಾರ್

ಕುಕನೂರು: ನೈಜ ಮತ್ತು ಕಡ್ಡಾಯ ಮತದಾನದಿಂದ ದೇಶದ ಪ್ರಗತಿ ಸಾಧ್ಯ ಎಂದು ತಾಪಂ ಯೋಜನಾಧಿಕಾರಿ ಆನಂದ ಗರೂರು ಹೇಳಿದರು.

ತಳಕಲ್ ಗ್ರಾಪಂನಲ್ಲಿ ಎಸ್‌ಆರ್‌ಐ ಪರಿಶೀಲನಾ ಅಭಿಯಾನದ ಭಾಗವಾಗಿ ಸಿದ್ಧಪಡಿಸಲಾದ ಮತದಾರರ ಕರಡು ಪ್ರತಿಗೆ ಅನುಮೋದನೆಯ ಗ್ರಾಮಸಭೆಯಲ್ಲಿ ಸೋಮವಾರ ಮಾತನಾಡಿದರು. ನೈಜ ಹಾಗೂ ಕಡ್ಡಾಯ ಮತದಾನವು ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರಮುಖವಾಗಿದೆ. ಪ್ರತಿಯೊಬ್ಬ ಅರ್ಹ ಮತದಾರ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ನಾಂದಿ ಹಾಡಬೇಕು ಎಂದರು.
ಪಿಡಿಒ ವೀರನಗೌಡ ಚೆನ್ನವೀರನಗೌಡ ಮಾತನಾಡಿ, ಗ್ರಾಪಂನ ನೋಟಿಸ್ ಬೋರ್ಡ್‌ಗೆ ಮತದಾರರ ಕರಡು ಪ್ರತಿ ಲಗತ್ತಿಸಲಾಗಿದ್ದು, ಸೆ.10ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ. ಕರಡು ಪಟ್ಟಿಯಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ತಿಳಿಸಬೇಕು. ಮತದಾರರು ಕರಡು ಪಟ್ಟಿಯಲ್ಲಿಹೆಸರು, ವಿಳಾಸ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. 
ಹೆಸರಿನಲ್ಲಿ ತಪ್ಪುಗಳಿದ್ದಲ್ಲಿ ಅಥವಾ ಹೊಸದಾಗಿ ಹೆಸರು ಸೇರ್ಪಡೆ ಮಾಡಬೇಕಿದ್ದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳು ಹಾಗೂ ತಿದ್ದುಪಡಿಗಳನ್ನು ಪರಿಶೀಲಿಸಿದ ನಂತರ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದರು. ತಾಪಂ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಇತರರಿದ್ದರು.