ಕೊಪ್ಪಳ ತಾಲೂಕಿನ ಹಣವಾಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕಾರ್ಮಿಕರ ದಿನಾಚರಣೆ ಮಾಡಿ, ಕಾರ್ಮಿಕರಿಗೆ ಕೇಕ್ ತಿನ್ನಿಸಲಾಯಿತು. ಹಲಗೇರಿ ಗ್ರಾಂಪಂ ಪಿಡಿಒ ಸಂಗಮೇಶ ತೇರಿನ, ಗ್ರಾಂಪಂ ಡಿಇಒಗಳಾದ ಮಾಲತೇಶ, ಪಂಚಾಕ್ಷರಿ, ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಇದ್ದರು.
- ಪಿಡಿಒ ಸಂಗಮೇಶ ತೇರಿನ ಅಭಿಪ್ರಾಯ
- ಕಾರ್ಮಿಕರ ದಿನಾಚರಣೆ
ಕೊಪ್ಪಳ : ಮಾನವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಮಿಕರ ಪಾತ್ರ ಬಹು ಮುಖ್ಯವಾಗಿದೆ. ಕಾರ್ಮಿಕರ ಶ್ರಮವೇ ದೇಶದ ಪ್ರಗತಿಯ ಮೂಲ ಶಕ್ತಿಯಾಗಿದೆ ಎಂದು ಹಲಗೇರಿ ಗ್ರಾಂಪಂ ಪಿಡಿಒ ಸಂಗಮೇಶ ತೇರಿನ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಂಪಂ ವ್ಯಾಪ್ತಿಯ ಹಣವಾಳದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಮಿಕರ ದಿನ ದೇಶದ ಅಭಿವೃದ್ದಿಗೆ ಬೆನ್ನೆಲುಬಾದ ಕಾರ್ಮಿಕ ವರ್ಗದ ಗೌರವ ಮತ್ತು ಹಕ್ಕುಗಳನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವದರ ಜತೆಗೆ ನ್ಯಾಯಸಮ್ಮತ ವೇತನ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಮಾನವೀಯ ಬದುಕಿನ ಹಕ್ಕುಗಳಿಗಾಗಿ ಹೋರಾಟದ ಸಂಕೇತವಾಗಿದೆ. ಕಾರ್ಮಿಕರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನ ದಿನವು ಕಾರ್ಮಿಕರನ್ನು ಗೌರವಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮಾತನಾಡಿ, ಕಾರ್ಮಿಕರು ಕೇವಲ ಕೆಲಸಕ್ಕೆ ಮಾತ್ರ ಗಮನಹರಿಸದೇ ಉತ್ತಮ ಜೀವನಕ್ಕಾಗಿ ಆರೋಗ್ಯದ ಕಡೆಗೆ ಗಮನಹರಿಸಬೇಕು. ಕಾರ್ಮಿಕರ ಬದುಕು ಸಂಕಷ್ಟಗಳಿಂದ ಕೂಡಿರುತ್ತದೆ. ಪ್ರತಿ ಶ್ರಮದ ಮೂಲಕ ಕುಟುಂಬದ ಜೀವನ ಸಾಗಿಸುವಂತದ್ದು. ಎಲ್ಲಾ ಕಾರ್ಮಿಕರು ಕುಟುಂಬದ ಹಿತದೃಷ್ಟಿಯಿಂದ ಸಾಮಾಜಿಕ ಭದ್ರತೆ ವಿಮೆಗಳಾದ ಪಿಎಂಎಸ್ಬಿವೈ., ಪಿಎಂಜೆಜೆಬಿವೈ ಗಳನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಹೇಳಿದರು.
ಗ್ರಾಂಪಂ ಡಿಇಒಗಳಾದ ಮಾಲತೇಶ, ಪಂಚಾಕ್ಷರಿ, ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಾಯಕ ಬಂಧುಗಳಾದ ರುದ್ರಪ್ಪ, ಗವಿಸಿದ್ದಪ್ಪ ಇತರರಿದ್ದರು.
ಕೇಕ್ ಕತ್ತರಿಸಿದ ಕಾರ್ಮಿಕರು
ಗ್ರಾಂಪಂನಿಂದ ಕಾರ್ಮಿಕ ದಿನಾಚರಣೆ ಆಯೋಜಿಸಿದ ಪ್ರಯುಕ್ತ ಮಹಿಳಾ ಮತ್ತು ಪುರುಷ ಕಾರ್ಮಿಕರು ಕೇಕ್ ಕತ್ತರಿಸುವ ಮೂಲಕ ಕಾರ್ಮಿಕರ ದಿನ ನಮ್ಮ ದಿನವೆಂದು ಆಚರಿಸಿ ಸಂಭ್ರಮಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ ಕೇಕ್ ತಿನಿಸುವ ಮೂಲಕ ಕಾರ್ಮಿಕ ದಿನ ಅದ್ದೂರಿಯಾಗಿ ಆಚರಿಸಲಾಯಿತು.
"
ಪ್ರಸ್ತುತ ಬೇಸಿಗೆ ಇರುವದರಿಂದ ನಮ್ಮ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕೆಲಸ ನೀಡಿದ್ದು, ನಮಗೆ ಅನುಕೂಲವಾಗಿದೆ. ಕಾರ್ಮಿಕ ದಿನವನ್ನು ಕೂಲಿಕಾರರ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮಾಡಿರುವದು ನಿಜಕ್ಕೂ ಕಾರ್ಮಿಕ ದಿನ ಅರ್ಥಪೂರ್ಣವಾಗಿದೆ.
— ದೇವಮ್ಮ ಪೂಜಾರ, ಮಹಿಳಾ ಕೂಲಿ ಕಾರ್ಮಿಕ ಹಣವಾಳ.