ಭಾಗ್ಯನಗರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಕ್ಕ-ಬುಕ್ಕರ ಜಯಂತಿ ಆಚರಿಸಲಾಯಿತು. ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ರಾಜ್ಯ ಸಂಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ, ಪದಾಧಿಕಾರಿಗಳಾದ ಪರಶುರಾಮ ಅಣ್ಣಿಗೇರಿ, ಪದಾಧಿಕಾರಿಗಳಾದ ಹನುಮಂತಪ್ಪ ಹನುವಾಪುರ್, ದ್ಯಾಮನಗೌಡ ಪಾಟೀಲ್, ಭೀಮೇಶ ಪೂಜಾರ್ ಇತರರಿದ್ದರು. 
ಕೊಪ್ಪಳ

ಹಕ್ಕ-ಬುಕ್ಕರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಸಾವ್ರಾಜ್ಯ
  • ಸ್ಥಾಪಿಸಿ
  • ಹಿಂದೂ ಧರ್ಮ
ಕೊಪ್ಪಳ: ಹಕ್ಕ ಬುಕ್ಕರು 1336ರಲ್ಲಿ ಜಗತ್ಪ್ರಸಿದ್ಧ ವಿಜಯನಗರ ಸಾವ್ರಾಜ್ಯವನ್ನು ಸ್ಥಾಪಿಸಿ ಹಿಂದೂ ಧರ್ಮ ರಕ್ಷಿಸಿದರು. ವಿಜಯನಗರ ಸಾವ್ರಾಜ್ಯ ನಮ್ಮ ಹಿಂದೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಸಾವ್ರಾಜ್ಯವಾಗಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಹೇಳಿದರು.
ತಾಲೂಕಿನ ಭಾಗ್ಯನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಕ್ಕ-ಬುಕ್ಕರ ಜಯಂತಿ ಆಚರಿಸಿ ವಾತನಾಡಿದರು. ವಿದ್ಯಾರಣ್ಯ ಗುರುಗಳ ಮತ್ತು ಬೀರಪ್ಪ ಈಶ್ವರ ಈಗಿನ ವಿರೂಪಾಕ್ಷೇಶ್ವರನ ಆಶೀರ್ವಾದದಿಂದ ತುಂಗಭದ್ರಾ ನದಿ ತೀರದಲ್ಲಿ ಹಂಪಿಯನ್ನು ರಾಜಧಾನಿಯನ್ನಾಗಿ ವಾಡಿಕೊಂಡು ಕುರುಬ ಸಮುದಾಯದ ಸಹೋದರರಾದ ಹಕ್ಕ-ಬುಕ್ಕರು ಜತೆಗೂಡಿ ವಿಜಯನಗರ ಸಾವ್ರಾಜ್ಯವನ್ನು ಸ್ಥಾಪನೆ ವಾಡಿದರು.
ನಂತರ ಬಂದ ರಾಜರು ಅದನ್ನು ಒಂದು ಶ್ರೀಮಂತ ಸಾವ್ರಾಜ್ಯವನ್ನಾಗಿ ವಾಡಿದ್ದಲ್ಲದೇ, ಭಾರತದ ಸಂಸ್ಕೃತಿ ಮತ್ತು ಧರ್ಮವನ್ನು ಶಿಲ್ಪ ಕಲೆಯ ಹಾಗೂ ಸಾಹಿತ್ಯ ಸಂಗೀತದ ಮೂಲಕ ರಕ್ಷಿಸಲು ಮುಂದಾದರು ಎಂದರು.