ಯಲಬುರ್ಗಾದಲ್ಲಿ ಹಜರತ್ ಸೈಯದ್ ಅಷರಫ್ ಷಾ ಅಲಿ-ವಲಿ(ಸುನ್ನಿ) ಉರುಸ್ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಾಮರಸ್ಯ ಸಂಗಮ ಕಾರ್ಯಕ್ರಮದಲ್ಲಿ ಪತ್ರಕರ್ತ ರಹೆಮತ್ ಕಂಚಗಾರ ಮಾತನಾಡಿದರು. ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಹಜರತ್ ಸೈಯರ ಶಾಹ ಮುರ್ತುಜಾ ಹುಸೇನಿ ಉಲ್ ಖಾದ್ರಿ-ಉರ್ಫ್ ಫೈಸಲ್ ಪಾಷಾ ಸಜ್ಜಾದ ನಸೀನ್ ಇಲಕಲ್, ಪೀರ ತರೀಯಿತ್ ಖಾಜಾ ಸೈಯದ್ ಮೊಹಮ್ಮದ್ ಅಬ್ದುಲ್‌ಬಾದರ ಖಾದ್ರಿ, ಮುಷಾಹಿದುಲ್ಲಾಹ ಅಫಿ ಆನು ಇತರರಿದ್ದರು.
- ಹಿಂದು-ಮುಸ್ಲಿಂ
- ಸಾಮರಸ್ಯ
- ಕದಡುವ
ಯಲಬುರ್ಗಾ: ಪ್ರತಿಯೊಬ್ಬರೂ ಪರಸ್ಪರ ಗೌರವ-ಪ್ರೀತಿಯಿಂದ ಬದುಕಬೇಕು ಎಂದು ಪತ್ರಕರ್ತ ರಹೆಮತ್ ಕಂಚಗಾರ ಹೇಳಿದರು.
ಪಟ್ಟಣದಲ್ಲಿ ಹಜರತ್ ಸೈಯದ್ ಅಷರಫ್ ಷಾ ಅಲಿ-ವಲಿ(ಸುನ್ನಿ) ಉರುಸ್ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸಾಮರಸ್ಯ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂತ ಮಹಾನುಭಾವರ ಸ್ಮರಣಾರ್ಥ ಆಚರಿಸುವ ಪವಿತ್ರ ಉತ್ಸವ ಇದಾಗಿದ್ದು, ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಸಹೋದರತ್ವ ಬಲಪಡಿಸುವ ಮಹೋತ್ಸವವಾಗಿದೆ. ಉರುಸ್ ಸಂದರ್ಭದಲ್ಲಿ ವಿವಿಧ ಧರ್ಮಗಳ ಜನರು ಒಂದೇಕಡೆ ಸೇರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ನಿಜವಾದ ಸಾಮರಸ್ಯದ ಸಂಕೇತವಾಗಿದೆ. ಕವ್ವಾಲಿ ಗಾಯನ, ಉಪನ್ಯಾಸಗಳು, ಅನ್ನಸಂತರ್ಪಣೆ ಹಾಗೂ ಸೇವಾ ಚಟುವಟಿಕೆಗಳು ಉರುಸ್ ವೈಶಿಷ್ಟ ್ಯಗಳಾಗಿವೆ. ಇವು ಸಮಾಜದಲ್ಲಿ ಏಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಬದುಕಬೇಕು ಎಂದರು.
ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಹಿಂದು-ಮುಸ್ಲಿಂ ಸಾಮರಸ್ಯ ಕದಡುವ ಉದ್ದೇಶದಿಂದ ಕೆಲ ರಾಜಕಾರಣಿಗಳು ದ್ವೇಷದ ವಾತಾವರಣ ನಿರ್ಮಿಸಲು ಯತ್ನಿಸುತ್ತಿದ್ದಾರೆ. ಯಾರು ಎಷ್ಟೇ ದ್ವೇಷ ಹರಡುವ ಪ್ರಯತ್ನ ಮಾಡಿದರೂ ಎಲ್ಲ ಧರ್ಮದವರು ಶಾಂತಿ ಮತ್ತು ಸಾಮರಸ್ಯದಿಂದಲೇ ಬದುಕಬೇಕು ಎಂದರು.
ಪ್ರಮುಖರಾದ ಮೈಹಿಬೂಬಸಾಬ ಮಕಾಂದರ, ವೀರಣ್ಣ ಹುಬ್ಬಳ್ಳಿ, ಅಂದಯ್ಯ ಕಳ್ಳಿಮಠ, ಮೌಲಾನ ಮುಸ್ತಾಫ, ಅಮರಪ್ಪ ಕಲಬುರಗಿ, ಕಳಕಪ್ಪ ತಳವಾರ, ಈರಪ್ಪ ಬಣಕಾರ, ಬಾಬುಸಾಬ ಮಂಡಲಗೇರಿ, ಬಾಬುಸಾಬ ಕುಂದಗೋಳ, ದೊಡ್ಡಯ್ಯ ಗುರುವಿನ, ಪಿ.ಟಿ.ಉಪ್ಪಾರ, ಷಣ್ಮುಖಪ್ಪ ರಾಂಪೂರ, ಮಹಿಮೂದ ಖಾಜಿ, ಬುಡನಸಾಬ್ ಧಪೇದಾರ್, ಅಶೋಕ ಅರಕೇರಿ, ಡಾ.ವಿವೇಕ ವಾಗುಲೆ, ಡಾ.ಶೇಖರ ಭಜೆಂತ್ರಿ, ಶಾಮೀದ ಮುಲ್ಲಾ ಇತರರು ಇದ್ದರು.