ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರಗತಿಪರಿಶೀಲನಾ ಸಭೆಯಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ಸದಸ್ಯ ಆನಂದ ಹಾಸಲ್ಕರ್ ಇತರರಿದ್ದರು. 
ಕೊಪ್ಪಳ

ಮೃತರ ಖಾತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿಕೆ
  • ಪ್ರಗತಿ ಪರಿಶೀಲನಾ ಸಭೆ
ಗಂಗಾವತಿ: ಮೃತರ ಖಾತೆಗಳಿಗೆ ಗ್ಯಾರಂಟಿ ಯೋಜನೆ ಹೋಗದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕಿದ್ದು, ಬ್ಯಾಂಕ್ ಖಾತೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸುವಂತೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.
ತಾಪಂ ಮಂಥನ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮೃತರ ಖಾತೆಗೂ ಯೋಜನೆ ಹಣ ಹೋಗಿರುವ ಬಗ್ಗೆ ಮಾಹಿತಿಯಿದ್ದು, ಸರ್ವೇ ಮೂಲಕ ಖಚಿತಪಡಿಸಿಕೊಳ್ಳಬೇಕು. ಖಾತೆಗೆ ಹಣ ಜಮೆಯಾಗಿದ್ದರೆ, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂವಹನ ಸಾಧಿಸಿ, ತಾತ್ಕಾಲಿಕ ಸ್ಥಗಿತಗೊಳಿಸಬೇಕು. ಯೋಜನೆ ಆರಂಭವಾಗಿ 3 ವರ್ಷವಾಗುತ್ತಿದ್ದು, ಲಾನುಭವಿಗಳ ಸಮಾವೇಶ ಹಮ್ಮಿಕೊಂಡು ಅಭಿಪ್ರಾಯ ಸಂಗ್ರಹಿಸಬೇಕು.
ಪಡಿತರ ಫಲಾನುಭವಿಗಳಿಗೆ ಪಡಿತರ ವಿತರಕರು, ಆದಾಯ, ಜಾತಿ ಪ್ರಮಾಣ ಪತ್ರ ಕೇಳುತ್ತಿರುವ ಬಗ್ಗೆ ಮಾಹಿತಿಯಿದ್ದು, ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಸರ್ಕಾರದ ಆದೇಶಗಳನ್ನು ಜನರಿಗೆ ತಿಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಮಾಧ್ಯಮದ ನೆರವು ಪಡೆಯಬೇಕು. ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ ಮಾತನಾಡಿ, ಪಡಿತರ ಅಂಗಡಿಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರಿಗೆ ಪಡಿತರ ವಿತರಿಸುವ ಬಗ್ಗೆ ಸರ್ಕಾರದ ಆದೇಶವಿದ್ದು, ಎಲ್ಲಿಯೂ ಪ್ರಚಾರ ಕೈಗೊಂಡಿಲ್ಲ. ಆದೇಶ ತಾತ್ಕಾಲಿಕ ಅಥವಾ ಶಾಶ್ವತ ಎಂಬುದರ ಬಗ್ಗೆ ಅಧಿಕಾರಿಗಳು ಜನರಿಗೆ ತಿಳಿಸಬೇಕು. ಲಾನುಭವಿಗಳಲ್ಲಿ ಗೊಂದಲ ಮೂಡಿಸುವಂಥ ಕ್ರಮ ಕೈಗೊಳ್ಳದಂತೆ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಗಂಗಾವತಿ ತಾಲೂಕಿನಲ್ಲಿ 50,952, ಕನಕಗಿರಿ ತಾಲೂಕಿನಲ್ಲಿ 56,068 ಲಾನುಭವಿಗಳು ನೋಂದಾಯಿಸಿದ್ದು, 2 ತಾಲೂಕಿನಲ್ಲಿ 35 ಲಾನುಭವಿಗಳ ನೋಂದಣಿ ಬಾಕಿಯಿದೆ ಎಂದು ಸಿಡಿಪಿಒ ಶರಣಪ್ಪ ಮಾಹಿತಿ ನೀಡಿದರು. ಗೃಹ ಜ್ಯೋತಿ ಯೋಜನೆಯಡಿ 60,359 ಅರ್ಹ ಗ್ರಾಹಕರಿದ್ದು, 60,114 ಜನ ನೋಂದಣಿ ಮಾಡಿಸಿದ್ದಾರೆ. ಶೇ.99.59 ಗುರಿಸಾಧಿಸಿದೆ ಎಂದು ಜೆಸ್ಕಾಂ ಎಇಇ ಮಂಜುನಾಥ ತಿಳಿಸಿದರು. ಅನ್ನಭಾಗ್ಯ, ಯುವನಿಧಿ, ಸೀಶಕ್ತಿ ಯೋಜನೆ ಪ್ರಗತಿ ಪರಿಶೀಲಿಸಲಾಯಿತು. ಸದಸ್ಯ ಆನಂದ ಹಾಸಲ್ಕರ್, ವಿಷಯ ನಿರ್ವಾಹಕ ರವೀಂದ್ರ ಕುಲ್ಕರ್ಣಿ, ಆಹಾರ ಶಿರಸ್ತೇದಾರ್ ಶೇಖರಪ್ಪ ಇತರರಿದ್ದರು.