Revanth reddy 
ಕೊಪ್ಪಳ

ತ್ರಿವಳಿ ರಾಜ್ಯ ನೀರಾವರಿಗೆ ಕೇಂದ್ರ ನೆರವು ನೀಡಲಿ

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣ ಸಿಎಂ ರೇವಂತ ರೆಡ್ಡಿ ಮನವಿ
ಕೊಪ್ಪಳ: ತೆಲಂಗಾಣ, ಆಂಧ್ರ ಹಾಗೂ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಹಣಕಾಸಿನ ನೆರವು ನೀಡಬೇಕು ಎಂದು ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಮನವಿ ಮಾಡಿದರು.
ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂ ಕ್ರಸ್ಟ್​ಗೇಟ್​ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಗ ಮೈಸೂರು ರಾಜ್ಯ, ಹೈದ್ರಾಬದ್​ ರಾಜ್ಯ ಸೇರಿ ಡ್ಯಾಂಗೆ ಮುಹೂರ್ತ ಇಟ್ಟಿದೆ. ಇಂದು ಮಿತ್ರ ಡಿ.ಕೆ.ಶಿವಕುಮಾರ್​ ಉತ್ತಮ ಮುಹೂರ್ತ ನೋಡಿ ಗೇಟ್​ ಅಳವಡಿಸಿದ್ದಾರೆ. ಇದರಿಂದ ನಮ್ಮ ರಾಜ್ಯದ ಅನೇಕ ಜಿಲ್ಲೆಗಳ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್​.ಪಾಟೀಲ್​ ಅಭಿವೃದ್ಧಿ ಪರ ಇದ್ದಾರೆ.ಅವರ ನೇತೃತ್ವದಲ್ಲಿ ನಫ್ಟಿವಾಗಿ ಸಮುದ್ರ ಸೇರುವ ನದಿ ನೀರು ಉಳಿಸುವ ನಿರ್ಧಾರ ಮಾಡಿದ್ದೇವೆ. ಬಹು ವರ್ಫಿಗಳಿಂದ ಸಮಸ್ಯೆ ಇದೆ. ಹೂಳಿನ ಸಮಸ್ಯೆಯಿಂದ ನಮಗೆ 10 ಟಿಎಂಸಿ ನೀರು ಕೊರತೆ ಆಗುತ್ತಿದೆ. ಚಂದ್ರಬಾಬು ನಾಯ್ಡು, ಡಿ.ಕೆ.ಶಿವಕುಮಾರ್​ ಸೇರಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ.
ಅದಕ್ಕಾಗಿ ಒಗ್ಗಟ್ಟಟಾಗಿ ಓಡೋಡಿ ಬಂದಿದ್ದೇವೆ. ತೆಲಂಗಾಣ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಂಡ ರ್ನಿಣಯ ಇತಿಹಾಸದಲ್ಲಿ ದಾಖಲಾಗಲಿದೆ. ಹಿಂದೆ ರಾಜರು ರೈತರಿಗಾಗಿ ಡ್ಯಾಂ ಕಟ್ಟಿದ್ದಾರೆ. ಇಂದು ನಾವು ಅದನ್ನು ಮುಂದುವರೆಸಬೇಕಿದೆ. ಅಂತಾರಾಜ್ಯ ಜಲ ವಿವಾದ ಪರಿಹಾರಪಡಿಸಿಕೊಳ್ಳಬೇಕಿದೆ. ರೈತರು, ರಾಜ್ಯದ ಹಿತದೃಷ್ಟಿಯಿಂದ ಇದು ಅನಿವಾರ್ಯ. ಅದಕ್ಕಾಗಿ ನಾವು ಎಲ್ಲ ಅಡೆತಡೆ ತೊರೆದು ಒಂದಾಗಿದ್ದೇವೆ. ಡಿಕೆ ಶಿವಕುಮಾರ್​ ಇದಕ್ಕೆ ಪ್ರಯತ್ನಿಸಿ ನಮ್ಮನ್ನೆಲ್ಲ ಸೇರಿಸಿದ್ದಾರೆ.
ಕೃಷ್ಣಾ ಗೋದಾವರಿ, ತುಂಗಭದ್ರಾ ನದಿ ನೀರು ಹಂಚಿಕೆ ಸಮಸ್ಯೆ ಮೊದಲಿನಿಂದಲೂ ಇದೆ. ನಮ್ಮ ಪಾಲಿನ ನೀರು ನಾವು ಪಡೆಯಬೇಕಿದೆ. ಕೇಂದ್ರ ಸರ್ಕಾರ ಇದಕ್ಕೆ ಪರಿಹಾರ ಕಲ್ಪಿಸಲಿದೆ. ನೀವು ನಮ್ಮ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ನೀವು ರಚಿಸುವ ಸಮಿತಿಗೆ ನಾವು ಮೂವರು ಭಾಗಿಯಾಗುತ್ತೇವೆ. ನಮ್ಮ ಹಣಕಾಸಿನ ಪರಿಸ್ಥಿತಿ ಸರರಿಯಿಲ್ಲ. ಕೇಂದ್ರ ಹಣಕಾಸು ನೆರವು ನೀಡಬೇಕು. ನಮ್ಮ ಜನರು ನಿಮ್ಮ ಹೆಸರು ಹೇಳಿಕೊಂಡು ನಮ್ಮ ನೀರು ಪಡೆಯುತ್ತೇವೆ.
ಮೊದಲ ಬಾರಿಗೆ ಮೂವರು ಸಿಎಂಗಳು ಒಂದೇ ವೇದಿಕೆಯಲ್ಲಿ ಸೇರಿದ್ದೇವೆ. ಇದಕ್ಕೆ ಡಿಕೆ ಶಿವಕುಮಾರ್​ ಪ್ರಮುಖ ಕಾರಣ. ಕೇಂದ್ರ ಸಚಿವರನ್ನೂ ಕರೆಸಿದ್ದು ಅಭೂತಪೂರ್ವ ನಿರ್ಧಾರ ಎಂದು ಪ್ರಶಂಸಿದರು.