ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯೊಂದಿಗೆ ತೇಜಸ್.
- ಶಾರದಾ ಶಾಲೆಯ ವಿದ್ಯಾರ್ಥಿ ವಿಶೀಷ್ಟ ಸಾಧನೆ
ಕೊಪ್ಪಳ : ತಾಲೂಕಿನ ಕಿಡದಾಳನ ಶ್ರೀ ಶಾರದಾ ಇಂಟರ್ನ್ಯಾಷನಲ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ ತೇಜಸ್ 2026ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶಿಷ್ಟ ದಾಖಲೆ ಮಾಡಿ ಶಾಲೆ ಮತ್ತು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ತೇಜಸ್ ಅವರು ಕಣ್ಣುಮುಚ್ಚಿದ (ಬ್ಲೆಡ್ಫೋಲ್ಡ್) ಸ್ಥಿತಿಯಲ್ಲಿ ಮ್ಯಾಪ್ ಪಜಲ್ಗಳನ್ನು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ವೇಗವಾಗಿ ಪರಿಹರಿಸುವ ಅಪೂರ್ವ ಸಾಮರ್ಥ್ಯ ಪ್ರದರ್ಶಿಸಿ, ನಿಗದಿತ 5 ನಿಮಿಷಗಳಿಗಿಂತ ಮುಂಚೆಯೇ ಕಾರ್ಯವನ್ನು ಪೂರ್ಣಗೊಳಿಸಿ ಈ ಸಾಧನೆಯನ್ನು ಮಾಡಿದ್ದಾರೆ. ತೇಜಸ್ ಪರಿಶ್ರಮ, ಏಕಾಗ್ರತೆ, ತೀಕ್ಷ$್ಣಸ್ಮರಣಾಶಕ್ತಿ ಹಾಗೂ ನಿರಂತರ ಅಭ್ಯಾಸದ ಫಲವಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಮಹತ್ತರ ಸಾಧನೆಗಳಿಗೆ ದಾರಿಯಾಗಿದೆ.
ತೇಜಸ್ ಪೋಷಕರು ಮಗನ ಸಾಧನೆಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ತೇಜಸ್ ಸಾಧನೆ ಶ್ಲಾಘಿಸಿದ್ದಾರೆ. ಇಂತಹ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ತಿಳಿಸಿದರು.