ಕೇಸಲಾಪುರ ಶಾಲೆಗೆ ಬಣ್ಣ ಹಚ್ಚಿರುವುದು. 
ಕೊಪ್ಪಳ

ಶಾಲೆಯ ಅಂದ ಹೆಚ್ಚಿಸಿದ ಶಿಕ್ಷಕರು

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ
  • ಕಿರಿಯ
  • ಪ್ರಾಥಮಿಕ
ಅಳವಂಡಿ: ಸಮೀಪದ ಕೇಸಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಾಲೆಯ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಬಣ್ಣ ಬಳೆದು ಅಂದ ಹೆಚ್ಚಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕೆಲ ಶಿಕ್ಷಕರ ಸಂಘಟನೆಗಳು ಪ್ರತಿ ತಿಂಗಳಿಗೆ ಒಂದರಂತೆ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ ಶಾಲೆಗಳನ್ನು ಅಂದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೇಸಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 42 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಗೆ ವಿಶಾಲವಾದ ಆಟದ ಮೈದಾನ ಇದೆ.
ಸುತ್ತಲೂ 500 ಮೀಟರ್ ಆವರಣ ಗೋಡೆ ಇದೆ. ನಾಲ್ಕು ಶಾಲೆ ಕೊಠಡಿಗಳು ಇವೆ. ಆದರೆ ಆವರಣಗೊಡೆ, ಶಾಲಾ ಕೊಠಡಿ ಬಹಳ ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ ಇರುವುದರಿಂದ ಅಂದ ಮಾಸಿಹೋಗಿತ್ತು. ಇದನ್ನು ಮನಗಂಡ ಶಿಕ್ಷಕರು ಸ್ವಂತ ಖರ್ಚಿನಿಂದ ಶಾಲೆ ಹಾಗೂ ಆವರಣ ಗೋಡೆಗೆ ಬಣ್ಣವನ್ನು ಹಚ್ಚಿ ಅಂದಗೊಳಿಸುವ ಕಾರ್ಯ ಮಾಡಿದ್ದಾರೆ.
ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಅಶೋಕ ತವದಿ, ನಾಗರಾಜ ಶಾವಿ ಹಾಗೂ ಶಾಲೆಗೆ ಆಗಮಿಸಿದ ಶಿಕ್ಷಕರಾದ ಗಿರಿಯಪ್ಪ ಹಮ್ಮಗಿ, ರಾಘವೇಂದ್ರ ಗದ್ದಿಕೇರಿ ಸ್ವಯಂ ಪ್ರೇರಣೆ ಹಾಗೂ ಸ್ವಂತ ಖರ್ಚುನಿಂದ 80 ಸಾವಿರ ರೂ. ಖರ್ಚು ಮಾಡಿ ಶಾಲೆಗೆ ಬಣ್ಣ ಹಚ್ಚಿ ಅಂದಗೊಳಿಸಿದ್ದಾರೆ.
ಶಾಲೆಗೆ 15 ಸಾವಿರ ರೂ. ಮೌಲ್ಯದ ಅಲಮಾರ ನೀಡಿ ದಾಖಲೆಗಳನ್ನು ಸುರಕ್ಷಿತವಾಗಿ ಇಡಲು ಅನೂಕೂಲ ಮಾಡಿದ್ದಾರೆ. ಶಾಲೆಯಿಂದ ವರ್ಗಾವಣೆಗೊಂಡರೂ ಸಹ ಶಿಕ್ಷಕರು ಶಾಲೆಗೆ ಬಣ್ಣ ಹಚ್ಚಲು ಹಣ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಾಲೆಗೆ ಬಣ್ಣ ಹಚ್ಚಲು ಹಣ ನೀಡಿ
"

ಬಹಳ ವರ್ಷಗಳಿಂದ ಶಾಲೆಯ ಕಟ್ಟಡ ಸುಣ್ಣ ಬಣ್ಣ ಕಾಣದೆ ಅಂದ ಮಾಸಿತ್ತು. ಆವರಣ ಗೋಡೆ ಸಹ ಅಲ್ಲಲ್ಲಿ ಕಿತ್ತು ಹೋಗಿತ್ತು. ಶಾಲೆ ಶಿಕ್ಷಕರು ಸ್ವಂತ ಖರ್ಚಿನಿಂದ ಶಾಲೆಗೆ, ಆವರಣ ಗೊಡೆ ದುರಸ್ತಿ ಹಾಗೂ ಬಣ್ಣ ಮಾಡಿ ಅಂದಗೊಳಿಸಿದ್ದಾರೆ. ಇವರ ಕಾರ್ಯ ಶ್ಲಾಘನೀಯವಾಗಿದೆ.

"

ಕೇಸಲಾಪುರ ಶಾಲೆಗೆ ಶಿಕ್ಷಕರು ಸ್ವಂತ ಖರ್ಚಿನಿಂದ ಶಾಲೆಗೆ ಬಣ್ಣ ಮಾಡಿಸಿದ್ದಾರೆ. ಇದರಿಂದ ಶಾಲಾ ಕಟ್ಟಡ ಅಂದವಾಗಿದೆ. ಶಿಕ್ಷಕರ ಕಾರ್ಯ ಮೆಚ್ಚುವಂತಹದು.