ತಾವರಗೇರಾ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಲಯ ಪ್ರಾಥಮಿಕ ಶಿಕ್ಷಕರಿಗೆ ದ್ವಿಭಾಷಾ ಮಾಧ್ಯಮ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಸಿಆರ್‌ಪಿಗಳಾದ ಕಾಶೀನಾಥ ನಾಗಲೀಕರ, ರಾಗಪ್ಪ ಶ್ರೀರಾಮ, ಸಂಪನ್ಮೂಲ ವ್ಯಕ್ತಿಗಳಾದ ಗವಿಸಿದ್ದಪ್ಪ, ಪವನಕುಮಾರ, ಶಶಿಕಾಂತ ,ರವಿ, ದಾವಲಸಾಬ ಇದ್ದರು. 
ಕೊಪ್ಪಳ

ಆಂಗ್ಲ ಭಾಷೆ ಸುಲಭವಾಗಿ ಕಲಿಸಲಿ

ಪ್ರಮುಖ ಮುಖ್ಯಾಂಶಗಳು

  • ಸಿಆರ್‌ಪಿ ಕಾಶೀನಾಥ ನಾಗಲೀಕರ ಸೂಚನೆ
  • ತಾವರಗೇರಾ ದ್ವಿಭಾಷಾ ಮಾಧ್ಯಮ ತರಬೇತಿ
ತಾವರಗೇರಾ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಾಲ್ಕು ದಿನಗಳ ಕಾಲ ಏರ್ಪಡಿಸಿರುವ ದ್ವಿಭಾಷಾ ಮಾಧ್ಯಮ ತರಬೇತಿ ಕಾರ್ಯಕ್ರಮಕ್ಕೆ ಸಿಆರ್‌ಪಿಗಳಾದ ಕಾಶೀನಾಥ ನಾಗಲೀಕರ, ರಾಗಪ್ಪ ಶ್ರೀರಾಮ ಜಂಟಿಯಾಗಿ ಚಾಲನೆ ನೀಡಿದರು.
ಸಿಆರ್‌ಪಿ ಕಾಶೀನಾಥ ನಾಗಲೀಕರ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಮಕ್ಕಳಿಗೆ ಕನ್ನಡದ ಜತೆಗೆ ಆಂಗ್ಲ ಭಾಷೆಯನ್ನೂ ಸುಲಭವಾಗಿ ಕಲಿಸಲು ಶಿಕ್ಷಕರು ಸಜ್ಜಾಗಬೇಕು. ಸಂಪನ್ಮೂಲ ವ್ಯಕ್ತಿಗಳಾದ ಪವನಕುಮಾರ, ಗವಿಸಿದ್ದಪ್ಪ, ಶಶಿಕಾಂತ, ರವಿ ಕೋಳೂರ, ದಾವಲಸಾಬ ಮುಲ್ಲಾ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ತರಬೇತಿಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಗಳಿಗೆ ಬೋಧಿಸುವ ಶಿಕ್ಷಕರು ಪಾಲ್ಗೊಂಡಿದ್ದರು.