ಅಳವಂಡಿ ಸಮೀಪದ ಮುರ್ಲಾಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಕಲಿಕಾಹಬ್ಬ ಕಾರ್ಯಕ್ರಮವನ್ನು ಸಿರಸಂಗಿಯ ಶ್ರೀ ಸಂಗಮೇಶ್ವರ ದೇವರು ಉದ್ಘಾಟಿಸಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್, ನಿವೃತ್ತ ಉಪನ್ಯಾಸಕ ಸತೀಶ ಪಾಸಿ, ಸಿಆರ್‌ಪಿಗಳಾದ ಕೃಷ್ಣ, ವಿಜಯಕುಮಾರ ಟಿಕಾರೆ, ಪ್ರಮುಖರಾದ ವೆಂಕಟೇಶ ಬಾರಕೇರ, ಯಮನೂರಪ್ಪ ಕಟಗಾಲಿ ಇತರರಿದ್ದರು. 
ಕೊಪ್ಪಳ

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಕಲಿಕಾ ಹಬ್ಬ

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ

ಅಳವಂಡಿ: ಗಳಿಸಿದ ವಿದ್ಯೆ ಕೊನೇವರೆಗೂ ಇರುತ್ತದೆ. ಶಿಕ್ಷಕರ ತ್ಯಾಗ ಮನೋನಭಾವದಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದು ಎಂದು ಸಿರಸಂಗಿಯ ಶ್ರೀ ಸಂಗಮೇಶ್ವರ ದೇವರು ಹೇಳಿದರು.
ಸಮೀಪದ ಮುರ್ಲಾಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆ, ಹಣ, ಅಧಿಕಾರ, ದೌಲತ್ತು ಇರುವವನು ದೊಡ್ಡವನಲ್ಲ, ಸಂಸ್ಕಾರದೊಂದಿಗೆ ಕಷ್ಟದ ಕಾಲದಲ್ಲೂ ಸುಲಭ ಜೀವನ ನಡೆಸುವವನೇ ದೊಡ್ಡವನು. ವಿದ್ಯಾರ್ಥಿಗಳು ನಿರಂತರ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್ ಮಾತನಾಡಿ, ಮಕ್ಕಳು ಈ ನಾಡಿನ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂಥ ಕಾರ್ಯಕ್ರಮಗಳು ನಡೆಯಲಿ. ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ. ಪ್ರತಿಯೊಬ್ಬರೂ ನೀತಿವಂತನಾಗಬೇಕು. ಪಾಲಕರು ಮಕ್ಕಳ ಬಗ್ಗೆ ಜಾಗೃತರಾಗಬೇಕು ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಸತೀಶ ಪಾಸಿ, ಸಿಆರ್‌ಪಿಗಳಾದ ಕೃಷ್ಣ, ವಿಜಯಕುಮಾರ ಟಿಕಾರೆ, ಪ್ರಮುಖರಾದ ವೆಂಕಟೇಶ ಬಾರಕೇರ, ಯಮನೂರಪ್ಪ ಕಟಗಾಲಿ, ಭರಮಪ್ಪ ನಗರ, ನೀಲಪ್ಪ ಕರಿಗಾರ, ಗುರುಬಸವರಾಜ ಹಳ್ಳಿಕೇರಿ, ತೋಟಪ್ಪ ಶಿಂಟ್ರ, ಮಲ್ಲನಗೌಡ, ಹೊನ್ನಪ್ಪಗೌಡ, ಎಚ್.ಡಿ.ಪೂಜಾರ, ಅಂದಾನಗೌಡ, ಮಹಾದೇವಪ್ಪ, ಖಾದರಭಾಷಾ, ವೀರೇಶ ಕೌಟಿ, ವೆಂಕರಡ್ಡಿ ಇಮ್ಮಡಿ ಇತರರಿದ್ದರು.