ಬೆಟಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಗೆ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಅಭಿನವ ಶ್ರೀಕಂಠ ಸ್ವಾಮೀಜಿ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶರಾವ್, ಪ್ರಮುಖರಾದ ಜಗದೀಶ ಕೆ.ಎಚ್., ಚಂದ್ರಶೇಖರ ಬೆಟಗೇರಿ, ವೀರೇಶ ಸಜ್ಜನ ಇತರರಿದ್ದರು.
- ಅಳವಂಡಿ ಸಾಮೂಹಿಕ ಸತ್ಯ ನಾರಾಯಣ ಪೂಜೆ
- ಸ್ವಸಹಾಯ ಸಂಘಗಳ ಒಕ್ಕೂಟ
ಅಳವಂಡಿ: ಪೂಜೆ ಪುನಸ್ಕಾರಗಳು ಮನುಷ್ಯನಿಗೆ ಸಂಸ್ಕಾರ ಕಲಿಸುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಗುರುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಹ, ಮನಸ್ಸು ಹತೋಟಿಯಲ್ಲಿ ಇರಬೇಕೆಂದರೆ ಇಂತಹ ಕಾರ್ಯಕ್ರಮಗಳು ಅವಶ್ಯ. ಪಾಲಕರು ಮಕ್ಕಳಿಗೆ ಒಳ್ಳೆಯ ನಡೆ-ನುಡಿ, ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸಿ ಎಂದರು.
ಅಳವಂಡಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಪೂಜೆ, ಪ್ರಾರ್ಥನೆಯಿಂದ ಮನಸ್ಸು ಪರಿವರ್ತನೆ ಆಗಲು ಸಾಧ್ಯ. ದ್ವೇಷ, ಕೋಪ ತ್ಯಜಿಸಿ ದೈವಭಕ್ತಿ, ಸಂಸ್ಕಾರ ಬೆಳೆಸಿಕೊಂಡು ಹೋಗಿರಿ ಎಂದರು.
ಗಿಣಿಗೇರಾ ಅಭಿನವ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಪುಣ್ಯ ಕಾರ್ಯಗಳು ಜನರಲ್ಲಿ ಭಕ್ತಿ ತುಂಬುವ ಕೆಲಸ ಮಾಡುತ್ತವೆ. ಒಳ್ಳೆಯವರ ಸಂಘ ಮಾಡಿ, ಅನುಭವಿಗಳ ನುಡಿ ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಮುಖರಾದ ಜಗದೀಶ ಕೆ.ಎಚ್., ಚಂದ್ರಶೇಖರ ಬೆಟಗೇರಿ, ವೀರೇಶ ಸಜ್ಜನ, ಯಂಕಣ್ಣ, ಅನ್ನದಾನಸ್ವಾಮಿ ಸಾಲಿಮಠ, ಶರಣಪ್ಪ ಮಡಿವಾಳರ, ನವೀನಕುಮಾರ, ಸಿದ್ದಣ್ಣ, ಭೀಮಣ್ಣ, ಬಸವರಾಜ, ಸೋಮಪ್ಪ, ನಾರಾಯಣಪ್ಪ, ಶಿವು ಮೋರನಾಳ, ಹನುಮಂತ ಇತರರಿದ್ದರು.