- ಜಲ ಸಂಗ್ರಹ ಕಡಿತಕ್ಕೆ ಚಿಂತನೆ
- ಆತಂಕ ನಿವಾರಿಸಬೇಕಿದೆ ಸರ್ಕಾರ
- ಕರ್ನಾಟಕ ರಾಜ್ಯಕ್ಕೆ ಹೆಚ್ಚು ನಷ್ಟ
ವಿಜಯವಾಣಿ ವಿಶೇಷ ಕೊಪ್ಪಳ: ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ತುಂಡಾಗಿ ಎದುರಾಗಿದ್ದ ಅಭದ್ರತೆ ಹೊಸ ಸ್ಪಿಲ್ವೇ ಗೇಟ್ ಅಳವಡಿಕೆಯಿಂದ ಭವಿಷ್ಯಕ್ಕೆ ಭದ್ರತೆ ಕಲ್ಪಿಸಿದೆ. ಎಲ್ಲವೂ ಸರಿಯಾಯಿತು ಎಂದು ನಿಟ್ಟುಸಿರು ಬಿಡುವಾಗಲೇ ನೀರು ಸಂಗ್ರಹ ಸಾಮರ್ಥ್ಯ ಕಡಿತಗೊಳಿಸಲು ಮುಂದಾಗಿವುರುದು ಹೊಸ ಚರ್ಚೆ ಜತೆಗೆ ರೈತಾಪಿ ವರ್ಗದಲ್ಲಿ ಆತಂಕ ಹುಟ್ಟುಹಾಕಿದೆ.
ಅಂತಾರಾಜ್ಯ ನೀರಾವರಿ ಯೋಜನೆಯಾದ ತುಂಗಭದ್ರಾ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಪ್ರಮುಖ ಕೃಷಿ ಹಾಗೂ ಕುಡಿವ ನೀರಿನ ಆಧಾರ ಮೂಲ. 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ 28 ಟಿಎಂಸಿ ಹೂಳು ಭರ್ತಿಯಾಗಿ ಜೀವಜಲ ಶೇಖರಣೆ ಣಿಸುತ್ತಿದೆ. ಪರ್ಯಾಯ ಮಾರ್ಗ ಕಂಡುಕೊಳ್ಳುವುದಾಗಿ ಸರ್ಕಾರ ನೀಡುವ ಭರವಸೆ ಬಿಸಿಲು ಕುದುರೆಯಂತಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ತುಂಗಭದ್ರೆ ಒಡಲ ಪ್ರಮಾಣ ಚಿಕ್ಕದಾಗುತ್ತಿದೆ.
ಸೂಕ್ತ ನಿರ್ವಹಣೆ ನಡುವೆಯೂ ಕ್ಷಣ ಕಾಲ ಮೈಮರೆತಿದ್ದರಿಂದ 19ನೇ ಕ್ರಸ್ಟ್ ಗೇಟ್ ತುಂಡಾಗಿ ಬಹುದೊಡ್ಡ ಆಪತ್ತು ತಂದಿಟ್ಟಿತು. ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದ ಟಿಬಿಬಿ ಹಾಗೂ ರಾಜ್ಯ ಸರ್ಕಾರ ಸ್ಟಾಪ್ಲಾಗ್ ಗೇಟ್ ಅಳವಡಿಸಿ ನೀರು ನಿಲ್ಲಿಸಿತು. ವರ್ಷದೊಳಗೆ ಎಲ್ಲ 33 ಕ್ರಸ್ಟ್ ಗೇಟ್ಗಳನ್ನು ಬದಲಿಸಿ ಭವಿಷ್ಯದ 50 ವರ್ಷಕ್ಕೆ ಭದ್ರತೆ ಕಲ್ಪಿಸಿರುವುದು ರೈತರಲ್ಲಿ ಆಶಾಭಾವ ಮೂಡಿಸಿದೆ. ಇದಕ್ಕಾಗಿ ರೈತರು ಒಂದು ಬೆಳೆ ತ್ಯಾಗ ಮಾಡಿದ್ದು ನಷ್ಟ ಅನುಭವಿಸಿದ್ದಾರೆ.
ಇದೀಗ ನೀರು ಸಂಗ್ರಹ ಮಟ್ಟ ತಗ್ಗಿಸುವ ವಿಷಯ ಮುನ್ನೆಲೆಗೆ ಬಂದಿದೆ. ಕೇಂದ್ರ ಜಲ ಆಯೋಗ, ತಜ್ಞರ ಅಭಿಪ್ರಾಯ ಆಧರಿಸಿ ನೀರು ಶೇಖರಣೆ ಇಳಿಸಬೇಕಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೇ ನೋಡಿದರೆ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯದ ಬಗ್ಗೆ ಹಿಂದಿನಿಂದಲೂ ಗೊಂದಲಗಳು ಮುಂದುವರೆದಿವೆ.
2018ಕ್ಕು ಮೊದಲು ಜಲಾಶಯದಲ್ಲಿ 33 ಟಿಎಂಸಿ ಅಡಿ ಹೂಳಿದೆ ಎಂದು ಹೇಳಿದ್ದರು. 100.586 ಟಿಎಂಸಿ ನೀರು ಸಂಗ್ರಹಿಸಲಾಗುತ್ತಿತ್ತು. ನಂತರದಲ್ಲಿ ಮತ್ತೊಂದು ಸರ್ವೇ ವರದಿ ಆಧರಿಸಿ 28 ಟಿಎಂಸಿ ಸಿಲ್ಟ್ ಇದೆ. 105.788 ಟಿಎಂಸಿ ನೀರು ನಿಲ್ಲುತ್ತಿದೆ ಎಂದು ಹೇಳಿಕೊಂಡು ಬರಲಾಗುತ್ತಿದೆ. ಹಾಗಿದ್ದಲ್ಲಿ ಅಷ್ಟು ವರ್ಷಗಳವರೆಗೆ ಕಡಿತಗೊಂಡ ನೀರಿನ ಲೆಕ್ಕ ಏನಾಯಿತೆಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಭದ್ರತೆ ಬಗ್ಗೆ ಸ್ಪಷ್ಟತೆ ಇಲ್ಲವೆ ?
ಡ್ಯಾಂನಲ್ಲಿ ಹಿಡಿದಿಡುವ ಜಲಮಟ್ಟ ಕುಸಿತದಿಂದ ಯೋಜಿತ ಪ್ರದೇಶಕ್ಕೆ ಸಮರ್ಪಕವಾಗಿ ನೀರು ಹರಿಯುವುದಿಲ್ಲ. ಸಂಗ್ರಹಿತ ನೀರಿನಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು ದೊರೆಯಲಿದೆ. ಕಡಿತಗೊಂಡರೆ ರಾಜ್ಯಕ್ಕೆ ಹೆಚ್ಚಿನ ನಷ್ಟ. ಆಣೆಕಟ್ಟೆ ನಿರ್ಮಾಣವಾಗಿ 76 ವರ್ಷಗಳಾಗಿದ್ದು, ಯೋಜನೆಯಂತೆ 50 ವರ್ಷಕ್ಕೆ ಗೇಟ್ ಬದಲಾಯಿಸದ ಕಾರಣ ಅವಡ ಸಂಭವಿಸಿದೆ. ಇದೀಗ 33 ಸ್ಪಿಲ್ವೇ ಗೇಟ್ ಬದಲಾವಣೆಯಾಗಿವೆ. ಭವಿಷ್ಯದ 50 ವರ್ಷ ಯಾವುದೇ ಅಭದ್ರತೆ ಕಾಡದು ಎಂದು ಭರವಸೆ ನೀಡಲಾಗಿದೆ. ಹೀಗಿದ್ದರೂ ನೀರು ಸಂಗ್ರಹ ಮಟ್ಟ ಕಡಿತ ಮಾಡುವುದು ಏಕೆಂಬ ಬಗ್ಗೆ ಬೋರ್ಡ್ ಸ್ಪಷ್ಟಪಡಿಸಬೇಕಿದೆ. 105.788 ಟಿಎಂಸಿಯಿಂದ 100.788 ಟಿಎಂಸಿಗೆ ಇಳಿಸುತ್ತಿರುವುದರ ಬಗ್ಗೆ ಸೂಕ್ತ ಸಮರ್ಥನೆ ನೀಡಬೇಕಿದೆ.
ನೀವಾರಿಸಬೇಕಿದೆ ಆತಂಕ
ಈ ವರ್ಷ ಹಿಂಗಾರು ಬೆಳೆ ಕಳೆದುಕೊಂಡಿರುವ ಅಚ್ಚುಕಟ್ಟು ವ್ತಾಪ್ತಿ ರೈತರು ಈಗಷ್ಟೇ ನಿಟ್ಟುಸಿರು ಬಿಡುತ್ತಿದ್ದಾರೆ. ಈ ನಡುವೆ ಎಡದಂಡೆ ಮುಖ್ಯನಾಲೆ ಕೊಚ್ಚಿ ಹೋಗಿದ್ದು ಕಾಲುವೆ ಭದ್ರತೆ ಬಗ್ಗೆ ಹೊಸ ಆತಂಕ ಸೃಷ್ಟಸಿದೆ. ಹವಾಮಾನ ಇಲಾಖೆ ೆಸಿಪಿಕ್ ಮಹಾಸಾಗರದಲ್ಲಿ ಎಲ್ ನಿನೋ ಪ್ರಭಾವಳಿ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಮುಂಗಾರಿನ ಮೇಲೆ ನೇರ ಪರಿಣಾಮವಾದಲ್ಲಿ ಜಲಾಶಯಕ್ಕೆ ಹರಿದುವ ಬರುವ ನೀರಿನ ಪ್ರಮಾಣ ಣಿಸಿದರೂ ಅಚ್ಚರಿಪಡಬೇಕಿಲ್ಲ. ಇವೆಲ್ಲವುಗಳ ನಡುವೆ ಲಭ್ಯವಿರುವ ನೀರಿನಲ್ಲೇ ಮತ್ತಷ್ಟು ಕಡಿತ ಮಾಡಿದಲ್ಲಿ ಭವಿಷ್ಯದಲ್ಲಿ ನೀರಿನ ಕೊರತೆ ತಂದೊಡ್ಡಿದರೆ ಎನೆಂಬ ಆತಂಕ ನಿವಾರಿಸುವ ಜವಾಬ್ದಾರಿ ರಾಜ್ಯ ಸರ್ಕಾರ, ಟಿಬಿ ಬೋರ್ಡ್ ಮೇಲಿದೆ.
ಕೊಟ್ಟ ಮಾತಿನಂತೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ಗಳನ್ನು ಏಪ್ರೀಲ್ ಮಾಸಾಂತ್ಯದೊಳಗೆ ಅಳವಡಿಸಲಾಗಿದೆ. ಚೈನ್ ಬದಲಾವಣೆ ಹಾಗೂ ಸಣ್ಣಪುಟ್ಟ ಕೆಲಸಗಳಿದ್ದು ಅವೂ ಮುಗಿಯಲಿವೆ. ಭವಿಷ್ಯದ 50 ವರ್ಷ ಡ್ಯಾಂ ಸುರತವಾಗಿರಲಿದೆ. ತಜ್ಞ ಕನ್ನಯ್ಯ ನಾಯ್ಡು ನೀರು ಸಂಗ್ರಹ ಮಟ್ಟ 100 ಟಿಎಂಸಿಗೆ ಇಳಿಸಬೇಕೆಂದು ಅಭಿಪ್ರಾಯ ನೀಡಿದ್ದಾರೆ. ನೀರು ಕಡಿತವಾದರೆ ನಮಗೆ ನಷ್ಟ ಆಗಲಿದೆ. ಈ ಬಗ್ಗೆ ಬೋರ್ಡ್ನೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
— ಶಿವರಾಜ ತಂಗಡಗಿ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ, ಐಸಿಸಿ ಅಧ್ಯಕ್ಷ.