ಕೊಪ್ಪಳ ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಕೆ ಕಾಮಗಾರಿಯನ್ನು ಗುರುವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳ ವೀಸಿದರು. ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಇಂಜಿನಿಯರ್​ಗಳಿದ್ದರು.  
ಕೊಪ್ಪಳ

ಟಿಬಿ ಡ್ಯಾಂ 24 ಕ್ರಸ್ಟ್​ ಅಳವಡಿಕೆ ಪೂರ್ಣ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿ ವೀಕ್ಷಿಸಿದ ಡಿಸಿ
ಕೊಪ್ಪಳ: ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಕೆ ಕಾರ್ಯವನ್ನು ಗುರುವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೀರಾವರಿ ನಿಗಮದ ಅಧಿಕಾರಿಗಳು, ತುಂಗಭದ್ರಾ ಮಂಡಳಿ ಅಭಿಯಂತರರು ಗೇಟ್​ ಅಳವಡಿಕೆ ವಿವರ ನೀಡಿದರು. 33 ಗೇಟ್​ ಪೈಕಿ 32 ತಯಾರಾಗಿವೆ. ಒಂದು ಗೇಟ್​ ಸಿದ್ಧಗೊಳ್ಳುತ್ತಿದೆ. ಗೇಟ್​ 1ರಿಂದ 14 ಮತ್ತು 16 ರಿಂದ 33ವರೆಗಿನ ಒಟ್ಟು 32 ಗೇಟ್​ಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. 15ನೇ ಗೇಟ್​ ತೆರವುಗೊಳಿಸಲಾಗುತ್ತಿದೆ. 20 ಗೇಟ್​ಗಳ ಪ್ರಾಯೋಗಿಕ ಚಾಲನೆ ಪೂರ್ಣಗೊಂಡಿದೆ (1, 2, 3, 4, 11, 12, 17, 18, 19, 20, 24, 25, 26, 27, 28, 29, 30, 31, 32 ಮತ್ತು 33) 24 ಗೇಟ್​ಗಳ ಅಳವಡಿಕೆ ಪೂರ್ಣಗೊಂಡಿದೆ (1, 2, 3, 4, 5, 6, 7, 11, 12, 17, 18, 19, 20, 21, 24, 25, 26, 27, 28, 29, 30, 31, 32 ಮತ್ತು 33). 7 ಗೇಟ್​ಗಳ ಕೆಲಸ ಪ್ರಗತಿಯಲ್ಲಿದೆ (8, 9, 10, 13, 14, 16 ಮತ್ತು 22) ಎಂದು ವಿವರಿಸಿದರು.
ನಿಗಧಿತ ಅವಧಿಯಲ್ಲಿ ಕೆಲಸ ಮುಗಿಸಬೇಕು. ಗುತ್ತಿಗೆದಾರರಿಂದ ಸರಿಯಾದ ಸಮಯಕ್ಕೆ ಕೆಲಸ ಮಾಡಿಸಿಕೊಳ್ಳುವಂತೆ ಡಿಸಿ ಸೂಚಿಸಿದರು. ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ನೀರಾವರಿ ನಿಗದಮ ಸಿಇ ಶ್ರೀನಿವಾಸರಡ್ಡಿ ಮಲ್ಲಿಗೆವಾಡ, ಟಿಆರ್​ ವಿಭಾಗ ಇಇ ನಾಗನಾಥ, ಎಇಇ ಧರ್ಮರಾಜ್​, ಟಿಬಿ ಬೋರ್ಡ್​ ಇಇ ಚಂದ್ರಶೇಖರ, ಸೆಕ್ಷನ್​ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಇತರರಿದ್ದರು.