ಪ್ರತಿಷ್ಟಿತ ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ (ಟಿಎಪಿಸಿಎಂಎಸ್) ಸೋಮವಾರ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕ ಚನ್ನಪ್ಪ ಮಳಗಿ ಬೆಂಬಲಿತರು ಮಾತ್ರ ಭಾಗವಹಿಸಿರುವುದು. ಚುನಾವಣಾಧಿಕಾರಿ ಶಿವಾಜಿ, ಸಿಇಒ ಅನಿಲ್ ಬಬಲಾದಿ ಇತರರಿದ್ದರು.
- ಕೋರಂ ಕೊರತೆ ಕಾರಣ
- 8 ನಿರ್ದೇಶಕರಲ್ಲಿ 6 ಮಂದಿ ಮಾತ್ರ ಭಾಗಿ
ಗಂಗಾವತಿ: ನಗರದ ಪ್ರತಿಷ್ಟಿತ ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆ ಕೋರಂ ಕೊರತೆಯಿಂದ ಮೂರನೇ ಬಾರಿಯೂ ರದ್ದಾಯಿತು.
ನಗರದ ಟಿಎಪಿಎಂಸಿ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರ ಚುನಾವಣೆ ೋಷಣೆಯಾಗಿದ್ದು, ಆಯ್ಕೆ ಮುನ್ನ ಸಭೆ ಆಯೋಜಿಸುವುದು ಕಾಯ್ದೆ.
ಸಂಘದಲ್ಲಿ 15 ಸದಸ್ಯರ ಬಲದಲ್ಲಿ ಗುಂಜಳ್ಳಿ ರಾಜಶೇಖರಪ್ಪ ಮೃತಪಟ್ಟಿದ್ದರೆ, ಪಿಎಸ್ಸೆಸ್ಸೆನ್ ಪ್ರತಿನಿಧಿಗಳಾದ ಸುಭಾಷ ತಿಪ್ಪಶೆಟ್ಟಿ ಮತ್ತು ಬಸನಗೌಡ ಅವರು ಪಿಎಸ್ಸೆಸ್ಸೆನ್‌ನಿಂದ ಗೆದ್ದಿಲ್ಲ ಎಂಬ ಕಾರಣಕ್ಕಾಗಿ ನಿರ್ದೇಶಕ ಸ್ಥಾನ ರದ್ದಾಗಿದೆ. 12 ನಿರ್ದೇಶಕ ಬಲದ ಸಭೆಯಲ್ಲಿ ಕನಿಷ್ಠ 7 ಸದಸ್ಯರು ಭಾಗವಹಿಸಬೇಕಿತ್ತು. ನಿರ್ದೇಶಕ ಚನ್ನಪ್ಪ ಮಳಗಿ ಬೆಂಬಲಿತ 6 ಸದಸ್ಯರು ಭಾಗವಹಿಸಿದ್ದರು. ಅನಾರೋಗ್ಯ ನೆಪವೊಡ್ಡಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋಗದ ನಾರಾಯಣಪ್ಪ ನಾಯಕ, ನಿರ್ದೇಶಕರಾದ ಈ.ನಾಗರಾಜ್, ಚೂಡಾಮಣಿ, ಗಿರೀಶ ನಾಯಕ, ಪ್ರಸಾದ ಮತ್ತು ಅಮರೇಶಪ್ಪ ಚುನಾವಣೆಯಿಂದ ದೂರ ಉಳಿದರು. ಹೀಗಾಗಿ ಚುನಾವಣೆ ರದ್ದುಗೊಳಿಸಲಾಯಿತು.
ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಿಷ್ಟೆ ಹೆಚ್ಚಾಗಿದ್ದು, ಇಬ್ಬರು ಬಿಜೆಪಿ ಬೆಂಬಲಿತರ ನಡುವೆ ಜಿದ್ದಾಜಿದ್ದಿ ಹೆಚ್ಚಾಗಿದೆ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆ ಮಾಡಿದ್ದರೂ, ಮೊದಲ ಅವಧಿ ನಮಗೆ ಬೇಕು ಎಂದು ಚನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ ಪಟ್ಟು ಹಿಡಿದಿದ್ದರಿಂದ ಮೂರನೇ ಬಾರಿಯೂ ಚುನಾವಣೆ ರದ್ದಾಗಿದೆ. ಮೂರನೇ ಬಾರಿ ರದ್ದಾಗಿದ್ದರಿಂದ ಆಡಳಿತ ಮಂಡಳಿ ಸೂಪರ್ ಸೀಡ್ ಆಗುವ ಸಾಧ್ಯತೆಗಳಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯ ಒಂದು ತಂಡ ಕಾಂಗ್ರೆಸ್ ಸಖ್ಯ ಬೆಳೆಸಲು ತಯಾರಿ ನಡೆಸಿಕೊಂಡಿತ್ತು.
ಈ ಬಗ್ಗೆ ಚುನಾವಣಾಧಿಕಾರಿ ಶಿವಾಜಿ ಪ್ರತಿಕ್ರಿಯಿಸಿ, ಕೋರಂ ಕೊರತೆಯಿಂದ ಚುನಾವಣೆ ಸಭೆ ರದ್ದಾಗಿದ್ದು, 8 ನಿರ್ದೇಶಕರು ಭಾಗವಹಿಸಬೇಕಿದ್ದ ಸಭೆಯಲ್ಲಿ 6 ಸದಸ್ಯರು ಮಾತ್ರ ಭಾಗವಹಿಸಿದ್ದರು. ಉಳಿದವರು ಅನಾರೋಗ್ಯ ನೆಪದಲ್ಲಿ ಸಭೆಗೆ ಬಂದಿಲ್ಲ. ಸಭೆಯ ನಿರ್ಣಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಸಿಇಒ ಅನಿಲ್ ಬಬಲಾದಿ, ಕಾರ್ಯದರ್ಶಿ ಸುಂಕಪ್ಪ ಇದ್ದರು.