ತಿಗರಿಯಲ್ಲಿ ನಡೆದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ಫ್ರೆಂಡ್ಸ್ ಕ್ರಿಕೆಟ್‌ಕ್ಲಬ್ಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ಗಂಗಪ್ಪ ಅಂಬಿಗೇರ, ವೀರೇಶ ಕುರಿ, ಬಸಣ್ಣ, ಮಾರುತೆಪ್ಪ ಇತರರಿದ್ದರು.
ಅಳವಂಡಿ: ಯುವಕರು ನಾಯಕತ್ವ ಗುಣ ಬೆಳೆಯಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕೆಂದು ಶಿಕ್ಷಕ ಗಂಗಪ್ಪ ಅಂಬಿಗೇರ ತಿಳಿಸಿದರು.
ಸಮೀಪದ ತಿಗರಿ ಗ್ರಾಮದಲ್ಲಿ ಶ್ರೀ ತಾಯಮ್ಮ ದೇವಿ ಕ್ರಿಕೆಟ್ ಸಮಿತಿಯಿಂದ ಶನಿವಾರ ನಡೆದ ತಿಗರಿ ಪ್ರೀಮಿಯರ್ ಲೀಗ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ ಎಂದರು. ಫ್ರೆಂಡ್ಸ್ ಕ್ರಿಕೆಟ್‌ಕ್ಲಬ್ಮೊದಲ, ಯುಎನ್ ಕ್ರಿಕೆಟ್ ಕ್ಲಬ್ ದ್ವಿತೀಯ, ಕಿಂಗ್ ಫಿಶರ್ ಕ್ರಿಕೆಟ್ ಕ್ಲಬ್ ತೃತೀಯ ಸ್ಥಾನ ಪಡೆಯಿತು.
ಪ್ರಮುಖರಾದ ಬಸಣ್ಣ ಕರಡಿ, ಮಾರುತೆಪ್ಪ ಹುಗ್ಗಿ, ಈರಪ್ಪ ಅಂಬಿಗೇರ, ಪ್ರಕಾಶ, ಸುರೇಶ ರೆಡ್ಡಿ, ವೀರೇಶ ಕುರಿ, ವೀರಭದ್ರ, ಶಿವು ಏಣಗಿ, ಪ್ರಸನ್ನ ಕರಡಿ, ವೆಂಕಟೇಶ, ಬಸವರಾಜ ತಳವಾರ, ಮಂಜು ಬಾರಕೇರ, ಶರಣು ಕುಂಟಗೇರಿ, ನಿಂಗಪ್ಪ ಮಡಿವಾಳ, ಬಸಯ್ಯ ಹೀರೆಮಠ, ರವಿ, ಕೋರಿಸಿದ್ದೇಶ, ರುದ್ರಪ್ಪ, ಶಿವು ಕರಡಿ ಇತರರಿದ್ದರು.