ಕುಕನೂರು ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀ ಬಸವೇಶ್ವರ ಜಯಂತ್ಯುತ್ಸವದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾಯಕಯೋಗಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಮುಖರಾದ ಅಂದಪ್ಪ ಜವಳಿ, ಶ್ರೀ ಮಹಾದೇವ ಸ್ವಾಮೀಜಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಇತರರಿದ್ದರು.
- ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಸಲಹೆ
ಕುಕನೂರು: ವಿಶ್ವಗುರು ಬಸವಣ್ಣನವರು ಸಹಬಾಳ್ವೆಯ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀ ಬಸವೇಶ್ವರ ಜಯಂತ್ಯುತ್ಸವ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಾಯಕಯೋಗಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಅನ್ಯರನ್ನು ನೋಡಿ ಅಸಹ್ಯ ಪಡುವ ಗುಣ ದೂರವಾಗಬೇಕು. ಅಂತರಂಗ ಹಾಗೂ ಬಹಿರಂಗ ಶುದ್ಧವಾಗಿಟ್ಟುಕೊಂಡು ಕೆಲಸಮಾಡಬೇಕು. ಮೇಲು-ಕೀಳೆನ್ನದೇ ಎಲ್ಲರೂ ಸಹಬಾಳ್ವೆ ಮಾಡಿದರೆ ಬದುಕಿನಲ್ಲಿ ನಿಜ ಸದ್ಘತಿ ಸಿಗುತ್ತದೆ ಎಂದರು. ಅನ್ನದಾನೀಶ್ವರ ಶಾಖಾಮಠದಿಂದ 71 ಗ್ರಾಮದ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಾಮಾನ್ಯ ಮಾತಲ್ಲ. ಈ ಸಾಧಕರು ತಮ್ಮ ಜೀವನವನ್ನು ಅತ್ಯಂತ ಧರ್ಮನಿಷ್ಠರಾಗಿ ಕಾಯಕ ಮಾಡುತ್ತಾ ಮಾದರಿಯಾಗಿ ಬದುಕಿದವರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದರಿಂದ ಅವರ ಮುಂದಿನ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು.
ಶ್ರೀ ಮಹಾದೇವ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್, ಪಪಂ ಅಧ್ಯೆಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಪ್ರಮುಖರಾದ ಅಂದಪ್ಪ ಜವಳಿ, ವೀರಣ್ಣ ಅಣ್ಣಿಗೇರಿ, ಬಸವನಗೌಡ ಪಾಟೀಲ ದೇಸಾಯಿ, ಅಶೋಕ ತೋಟದ, ಡಾ.ಜಂಬಣ್ಣ ಅಂಗಡಿ, ವೀರಯ್ಯ ತೋಂಟದಾರ್ಯಮಠ, ಎಂ.ಬಿ.ಅಳವಂಡಿ, ಸಂಗಮೇಶ ಕಲ್ಮಠ, ಲಕ್ಷ್ಮಣ ಕಾಳಿ, ಎಸ್.ಎಸ್ ಕೊಪ್ಪದ, ಕಳಕಪ್ಪ ಕುಂಬಾರ, ಖಾಸಿಂಸಾಬ್ ಸಂಗಟಿ, ಶೇಖಪ್ಪ ಕಂಬಳಿ, ಮಹಾದೇವಪ್ಪ ಮಡಿವಾಳರ ಇತರರಿದ್ದರು.