ಕಾರಟಗಿಯಲ್ಲಿ ಗ್ರೇಡ್-2 ತಹಸೀಲ್ದಾರ್‌ಗೆ ದಲಿತಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು. ಪ್ರಮುಖರಾದ ಯಲ್ಲಪ್ಪ ಕಟ್ಟಿಮನಿ, ಜಮದಗ್ನಿ ಚೌಡಕಿ, ಹುಲ್ಲೇಶ ತೊಂಡಿಹಾಳ, ದೇವರಾಜ ಉಳೇನೂರು, ಅಜ್ಮೀರ್ ಸಿಂಗಾಪು ಇತರರಿದ್ದರು.
ಕಾರಟಗಿ: ದಲಿತ ಮುಖಂಡ ಭೂಮಾನಂದ, ಯುವತಿ, ಮಹಿಳೆ ಕೊಲೆ ಪ್ರಕರಣ ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಪ್ರಮುಖರಾದ ಯಲ್ಲಪ್ಪ ಕಟ್ಟಿಮನಿ, ಜಮದಗ್ನಿ ಚೌಡಕಿ ಹಾಗೂ ಹುಲ್ಲೇಶ ತೊಂಡಿಹಾಳ ಮಾತನಾಡಿ, ಅಖಂಡ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ದಲಿತ ಸಮುದಾಯವು ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿದೆ.
ಕಳೆದ 25 ವರ್ಷಗಳಿಂದ ಸಮರ್ಪಕ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ. ಜಿಲ್ಲಾಡಳಿತದಲ್ಲಿಯೂ ದಲಿತರ ಪಾತ್ರ ಕಡಿಮೆಯಾಗಿರುವುದೇ ಕೊಲೆ, ಅತ್ಯಾಚಾರದಂತಹ ಅಮಾನುಷ ಕೃತ್ಯಗಳಿಗೆ ದಲಿತರು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.
ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ-ಹದ್ದಿನಾಳ ಮುಖ್ಯ ರಸ್ತೆಯಲ್ಲಿ ದಲಿತ ಮುಖಂಡ ಭೂಮಾನಂದ ಅವರನ್ನು ಹತ್ಯೆ ಮಾಡಿದ್ದು, ಎಲ್ಲ ಆರೋಪಿಗಳನ್ನು ಬಂಧಿಸದಿರುವುದು ಖಂಡನೀಯ. ಸಿರವಾರ ತಾಲೂಕಿನ ಹೊಕ್ರಾಣಿಯಲ್ಲಿ ಯುವತಿ ಅತ್ಯಾಚಾರ, ಕೊಲೆ, ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಬಳಿಕ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಮುಖ ದೇವರಾಜ ಉಳೇನೂರು, ಎಸ್‌ಡಿಪಿಐ ಸಂಘಟನೆಯ ಅಜ್ಮೀರ್ ಸಿಂಗಾಪುರ, ಮರಿಸ್ವಾಮಿ ಬರಗೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬಸವರಾಜ್ ಬಸವಣ್ಣಕ್ಯಾಂಪ್, ಮೌನೇಶ ಭಜರಂಗಿ, ಮಂಜುನಾಥ್ ಹುಳ್ಕಿಹಾಳ, ವೆಂಕಟೇಶ ಹುಳ್ಕಿಹಾಳ, ಓಂಕಾರಪ್ಪ ಈಳಿಗನೂರು, ದೇವರಾಜ್ ಕುಂಟೋಜಿ, ತಿಪ್ಪಣ್ಣ ಈಳಿಗನೂರು, ಎಸ್‌ಡಿಪಿಆರ್‌ನ ಇಮ್ರಾನ್ ಪಾಷಾ, ಶರಣಪ್ಪ ವಣಗೇರಿ, ದುರುಗೇಶ್ ಜಮಾಪುರ, ಸ್ವಾಮಿ ಬೂದಗುಂಪಾ ಇತರರಿದ್ದರು.