ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಮತ್ತು ಶಸ ಚಿಕಿತ್ಸೆ ಉಚಿತ ಶಿಬಿರವನ್ನು ಕೊಪ್ಪಳದ ಅಭಿನಯ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಕೆಎಲ್‌ಇ ಮಾಜಿ ಸದಸ್ಯ ಶಂಕ್ರಣ್ಣ ಮುನವಳ್ಳಿ, ಸ್ಥಾನಿಕ ಮಂಡಳಿ ಅಧ್ಯಕ್ಷ ಹೊಸ್ಕೇರಿ ಗಿರಿಯಪ್ಪ, ಸದಸ್ಯ ಪರಣ್ಣಮುನವಳ್ಳಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಇತರರಿದ್ದರು.
- ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಲಹೆ
- ಆರೋಗ್ಯ ತಪಾಸಣೆ, ಶಸ ಚಿಕಿತ್ಸೆ ಉಚಿತ ಶಿಬಿರ
ಗಂಗಾವತಿ: ಕರಗುವ ಸಂಪತ್ತಿಗಿಂತ ಸ್ವಸ್ಥ ಆರೋಗ್ಯ ಅಮೂಲ್ಯವಾಗಿದ್ದು, ಯಾಂತ್ರಿಕತೆಯ ಬದುಕಿಗೆ ಆದ್ಯತೆ ನೀಡದೇ ಆರೋಗ್ಯ ಪೂರ್ಣ ಜೀವನ ಪಡೆಯಬೇಕು ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ, ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯ ಕೆಎಲ್‌ಇ ಆಸ್ಪತ್ರೆ, ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ವೈದ್ಯಕೀಯ ಕಾಲೇಜು, ಕೆಎಲ್‌ಇ ಡಾ.ಸಂಪತ್‌ಕುಮಾರ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಮತ್ತು ಶಸ ಚಿಕಿತ್ಸೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಸಂತನಂತೆ ಬದುಕಬೇಕು. ಸಂತನೆಂದರೆ ಕೇವಲ ಯಾಂತ್ರಿಕತೆಯ ಬದುಕಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯತ್ತ ವಿಶೇಷ ಕಾಳಜಿವಹಿಸಬೇಕು. ಆರೋಗ್ಯ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಮಕ್ಕಳಿಗೆ ಆಸ್ತಿಗಿಂತ ಉತ್ತಮ ಆರೋಗ್ಯ, ಸಂಸ್ಕಾರ ನೀಡಬೇಕು. ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಶಿಬಿರ ಸಹಕಾರಿಯಾಗಿದೆ ಎಂದರು.
ಕೆಎಲ್‌ಇ ಸ್ಥಾನಿಕ ಮಂಡಳಿ ಸದಸ್ಯ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ತಂದ ಕೆಎಲ್‌ಇ ಸಂಸ್ಥೆ ಆರೋಗ್ಯ ಕ್ಷೇತ್ರವನ್ನು ಬಲಪಡಿಸಿದೆ. ಎಲ್ಲ ವರ್ಗದವರ ಅನುಕೂಲಕ್ಕಾಗಿ ಮೊದಲ ಬಾರಿಗೆ ಬೃಹತ್ ಆರೋಗ್ಯ ತಪಾಸಣೆ, ಶಸ ಚಿಕಿತ್ಸೆ ಶಿಬಿರ ಹಮ್ಮಿಕೊಂಡಿದ್ದು, ತಪಾಸಣೆಯೊಂದಿಗೆ ಶಸ ಚಿಕಿತ್ಸೆಗೆ ಆದ್ಯತೆ ನೀಡಿದೆ ಎಂದರು.
ಕಾಲೇಜಿನ 18 ಕೊಠಡಿಗಳಲ್ಲಿ ತಪಾಸಣೆ ಕೇಂದ್ರಗಳಿದ್ದು, ಹೃದಯರೋಗ, ಮೂತ್ರಪಿಂಡ, ಮೂತ್ರಕೋಶ, ಗ್ಯಾಸ್ಟ್ರೋ ಸರ್ಜರಿ, ಕ್ಯಾನ್ಸರ್, ನರರೋಗ, ಮಧುಮೇಹ, ಶ್ವಾಸಕೋಶ, ಮನೋರೋಗ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ಆರೋಗ್ಯ, ದಂತ, ನೇತ್ರ, ಕಿವಿ-ಮೂಗು-ಗಂಟಲು ವಿಭಾಗದಲ್ಲಿ 3 ಸಾವಿರಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಲಾಯಿತು. 210 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ, ಹುಬ್ಬಳ್ಳಿಗೆ ಶಿಾರಸ್ಸು ಮಾಡಲಾಯಿತು. ಅಲೋಪತಿ, ಆಯುರ್ವೇದ ಹಾಗೂ ಹೋಮಿಯೋಪಥಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕೆಎಲ್‌ಇ ಸಂಸ್ಥೆ ನಿರ್ದೇಶಕ ಮಂಜುನಾಥ್ ಮುನವಳ್ಳಿ, ಮಾಜಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಸದಸ್ಯ ಮಂಜುನಾಥ ಎಸ್.ಮುನವಳ್ಳಿ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಹೊಸ್ಕೇರಿ ಗಿರಿಯಪ್ಪ, ಸದಸ್ಯ ಎಚ್.ಪ್ರಭಾಕರ, ಹಿರಿಯ ವೈದ್ಯರಾದ ಜಿ.ಚಂದ್ರಪ್ಪ, ಎ.ಸೋಮರಾಜು, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಡಾ.ಚಂದ್ರಪ್ಪ, ಡಾ.ಸೋಮರಾಜ್, ಶಿಬಿರದ ಸಂಚಾಲಕ ಡಾ.ಅಲ್ಲಮಪ್ರಭು, ಪ್ರಾಚಾರ್ಯೆ ಡಾ.ಡಿ.ಎ.ಮಾನಸಾ, ಉಪನ್ಯಾಸಕರಾದ ಡಾ.ಚಂದ್ರಶೇಖರ ವ್ಯಾಕರನಾಳ್, ಸ್ನೇಹಾ ಶರತ್, ಜೈಬುನ್ನಿಸಾ ಇತರರಿದ್ದರು.