ಹನುಮಸಾಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರಕ್ಕೆ ಗಣ್ಯರು ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಪಟ್ಟದ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ಗ್ರಾಮ ಫಟಕದ ಅಧ್ಯಕ್ಷ ಯಮನೂರು ಮಡಿವಾಳರ ಇತರರಿದ್ದರು.
ಹನುಮಸಾಗರ: ರೈತರ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ನಂಬರ್ ಅಥವಾ ಆಧಾರದ ಮೇಲೆ ತೊಗರಿಯನ್ನು ಮಾರಾಟ ಮಾಡಬೇಕು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಪಟ್ಟೇದ ಮಾತನಾಡಿ, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 6 ಸಾವಿರ ರೂ. ಇದೆ. ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂಪಾಯಿಗೆ ಖರೀದಿಸಲಾಗುತ್ತದೆ. ರೈತರು ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ತೊಗರಿ ಖರೀದಿಸಲಾಗುತ್ತಿದೆ. ತೊಗರಿ ಖರೀದಿ ಪ್ರಕ್ರಿಯೆ ಮಾ.16ರವರೆಗೆ ನಡೆಯಲಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪರಸ್ಪಪ್ಪ ಹೊಸಮನಿ, ಮುಖಂಡರಾದ ಚಂದಪ್ಪ ತಳವಾರ, ಮೈಬುಸಾಬ ಮುಲ್ಲಾ, ಉಮೇಶ್ ಬಾಚಲಾಪುರ, ರಾಮಣ್ಣ ವಡ್ಡರ, ಈರಣ್ಣ ಸಂಗಮದ, ಬದ್ರಿನಾಥ್ ಪುರೋಹಿತ, ಸಂಗಪ್ಪ ಮಾನ್ವಿ, ಶಿವಪ್ಪ ಕಂಪ್ಲಿ, ಶರಣಪ್ಪ ಬಾಚಲಾಪುರ, ಸಲೀಂ ಖಾಜಿ, ದಾದೇಸಾಬ ಇತರರಿದ್ದರು.