ಅಳವಂಡಿ ಸಮೀಪದ ಕಾತರಕಿ ಗ್ರಾಮದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಮೈನಹಳ್ಳಿ-ಬಿಕನಹಳ್ಳಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಮರುಳಾರಾಧ್ಯ ಸ್ವಾಮೀಜಿ, ಪ್ರಮುಖರಾದ ಜಗದೀಶ ಕೆ.ಎಚ್., ನಾಗೇಶ, ವೆಂಕನಗೌಡ್ರ, ಶಿವಮ್ಮ ಇತರರಿದ್ದರು.
ಅಳವಂಡಿ: ಧರ್ಮಾಚರಣೆಯಿಂದ ಸುಖ-ಶಾಂತಿ ಲಭಿಸುತ್ತದೆ. ಸತ್ಯನಾರಾಯಣ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ನೇರವೇರುತ್ತವೆ ಎಂದು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗೇಶ ತಿಳಿಸಿದರು.
ಸಮೀಪದ ಕಾತರಕಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ. ಇದರಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ ಎಂದರು.
ಮೈನಹಳ್ಳಿ-ಬಿಕನಹಳ್ಳಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಜೀವನದಲ್ಲಿ ಉತ್ತಮ ನಡೆ-ನುಡಿಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಮನಃಶಾಂತಿ ಸಿಗಲಿದೆ ಎಂದರು.
ಅಳವಂಡಿಯ ಶ್ರೀ ಮರುಳಾರಾಧ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ದುಷ್ಟಬುದ್ಧಿ ಹಾಗೂ ಹಗೆತನ ಬೆಳೆಸಿಕೊಳ್ಳಬಾರದು. ನಮ್ಮಲ್ಲಿರುವ ಈ ಬುದ್ಧಿ ನಮ್ಮ ವ್ಯಕ್ತಿತ್ವ ನಾಶ ಮಾಡುವ ಜತೆಗೆ ನಮ್ಮಲ್ಲಿರುವ ಮಾನವೀಯ ಮೌಲ್ಯಗಳನ್ನು ಕೊಲ್ಲುತ್ತದೆ ಎಂದರು.
ಯೋಜನಾಧಿಕಾರಿ ಜಗದೀಶ ಕೆ.ಎಚ್, ಪ್ರಮುಖರಾದ ಶಿವಮ್ಮ ಭೈರಣ್ಣನವರ, ವೆಂಕನಗೌಡ್ರ ಹಿರೇಗೌಡ್ರ, ವಿರೂಪಾಕ್ಷ ಗೌಡ ಪೊಲೀಸ್ ಪಾಟೀಲ, ಯರಿಯಪ್ಪ ಗೌಡ ಹಿರೇಗೌಡ್ರ, ರಾಮನಗೌಡ ನಂದನಗೌಡ್ರ, ಯಲ್ಲನಗೌಡ ಮಾಲಿಪಾಟೀಲ, ಕೊಟ್ರಯ್ಯ ಅಬ್ಬಿಗೇರಿಮಠ, ನಾಗರಾಜ ಹುರಕಡ್ಲಿ, ಬಸವರಾಜ ಉಳ್ಳಾಗಡ್ಡಿ, ವಲಯ ಮೇಲ್ವಿಚಾರಕ ವಿಶ್ವನಾಥ ಹಿರೇಮಠ, ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರು ಒಕ್ಕೂಟ ಪದಾಧಿಕಾರಿಗಳು ಇದ್ದರು.