ಯಲಬುರ್ಗಾದಲ್ಲಿ ತಾಲೂಕು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಧರಣಾ, ಬಿಆರ್‌ಪಿಯ ಹುಸೇನ್ ಭಗವಾನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶರಣಯ್ಯ ಸರಗಣಾಚಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಬಳಿಗಾರ, ಶಿಕ್ಷಕ ಶಶಿಧರ ಮಾಲಿಪಾಟೀಲ ಇತರರಿದ್ದರು.
ಯಲಬುರ್ಗಾ: ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರವೇ ಉನ್ನತ ವ್ಯಕ್ತಿಯಾಗಿ ನಿರ್ಮಾಣವಾಗಲು ಸಾಧ್ಯ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಕೈಜೋಡಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಧರಣಾ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಯಲಬುರ್ಗಾ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೋಧನೆ ವೇಳೆ ವಿದ್ಯಾರ್ಥಿಗಳು ತಮಗೆ ತಿಳಿಯದ ವಿಷಯ ಕೇಳಿ ತಿಳಿದುಕೊಳ್ಳಬೇಕು. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಕಲಿಕೆ ಜತೆಗೆ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ನಡೆದರೆ ಮಕ್ಕಳ ಪ್ರತಿಭೆಗೆ ಬೆಲೆ ದೊರೆಯುತ್ತದೆ. ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಗ್ರಾಮಸ್ಥರು ಸಹಕಾರದೊಂದಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದರು.
ಬಿಆರ್‌ಪಿಯ ಹುಸೇನ್ ಭಗವಾನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶರಣಯ್ಯ ಸರಗಣಾಚಾರ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಬಳಿಗಾರ, ಶಿಕ್ಷಕ ಶಶಿಧರ ಮಾಲಿಪಾಟೀಲ, ಮುಖ್ಯಶಿಕ್ಷಕ ಸಿದ್ದಪ್ಪ ಕಟ್ಟಿ, ಕಳಕಮಲ್ಲಪ್ಪ ಅಂತೂರು, ಮೈಲಾರಪ್ಪ ನಾಯಕನೂರು, ಪರಮೇಶ ಚಿಂತಾಮಣಿ, ಚಂದ್ರಪ್ಪ ರಾಜೂರು, ನಾಗರಾಜ ನಡೂಲಕೇರಿ, ನಾಗರಾಜ ಕುರಿ, ಶಾಂತಪ್ಪ ಜುಮ್ಮಣ್ಣನವರ, ರಾಜಮಹಮ್ಮದ ಬಾಳಿಕಾಯಿ, ಮರ್ತುಜಸಾಬ ಮುಜಾವರ ಇತರರಿದ್ದರು.