ಅಳವಂಡಿ ಸಮೀಪದ ರಘುನಾಥನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಸೈಬರ್ ವಂಚನೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಸಲಹೆಗಾರ ಬಸವರಾಜ ವಡಗೇರಿ ಮಾತನಾಡಿದರು. ಬ್ಯಾಂಕ್ ಅಧಿಕಾರಿ ಮಹಾಂತೇಶ, ಸಿಬ್ಬಂದಿ ಗುರುಶಾಂತಯ್ಯ, ಪ್ರಮುಖರಾದ ಶಿವಪ್ಪ, ಸುರೇಶ, ಹನುಮಂತ, ಮರಿಯಪ್ಪ ಇತರರಿದ್ದರು.
- ಆರ್ಥಿಕ ಸಾಕ್ಷರತಾ ಸಲಹೆಗಾರ ಬಸವರಾಜ ವಡಿಗೇರಿ ಸಲಹೆ
- ಸೈಬರ್ ವಂಚನೆ ಕುರಿತ ಜಾಗೃತಿ ಕಾರ್ಯಕ್ರಮ
ಅಳವಂಡಿ: ಪ್ರತಿಯೊಬ್ಬ ನಾಗರಿಕರು ಕುಟುಂಬದ ಆರ್ಥಿಕ ಭದ್ರತೆಗಾಗಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಎಸ್‌ಬಿಐ ಕೊಪ್ಪಳ ಶಾಖೆ ಆರ್ಥಿಕ ಸಾಕ್ಷರತಾ ಸಲಹೆಗಾರ ಬಸವರಾಜ ವಡಿಗೇರಿ ಹೇಳಿದರು.
ಸಮೀಪದ ರಘುನಾಥನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಸೈಬರ್ ವಂಚನೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತ್ಯಂತ ಕಡಿಮೆ ಪ್ರೀಮಿಯಂ ದರದಲ್ಲಿ ದೊರೆಯುವ ಕೇಂದ್ರದ ಈ ಯೋಜನೆಗಳು ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗಲಿವೆ ಎಂದರು.
ಸಾರ್ವಜನಿಕರು ಬ್ಯಾಂಕ್ ಖಾತೆ ವಿವರಗಳು, ಒಟಿಪಿ ಅಥವಾ ಎಟಿಎಂ ದಾಖಲೆಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಆಮಿಷದ ಕರೆಗಳು ಅಥವಾ ಲಿಂಕ್‌ಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು ಎಂದರು. ಬ್ಯಾಂಕ್ ಅಧಿಕಾರಿ ಮಹಾಂತೇಶ, ಸಿಬ್ಬಂದಿ ಗುರುಶಾಂತಯ್ಯ, ಪ್ರಮುಖರಾದ ಶಿವಪ್ಪ, ಸುರೇಶ, ಹನುಮಂತ, ಮರಿಯಪ್ಪ ಇತರರಿದ್ದರು.