ಹಿರೇಸಿಂದೋಗಿ ಗ್ರಾಮದಲ್ಲಿ ಅಂಗವಿಕಲರ ಸಮನ್ವಯ ಗ್ರಾಮ ಸಭೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಿದ್ದಲಿಂಗಯ್ಯ ಮಾತನಾಡಿದರು. ಪಿಡಿಒ ಪ್ರಕಾಶ ಸಜ್ಜನ, ಕಾರ್ಯದರ್ಶಿ ಮಹೇಶ, ಪ್ರಮುಖರಾದ ಮಲ್ಲಿಕಾರ್ಜುನ, ಸಿದ್ದಲಿಂಗಯ್ಯ, ಭರಮಪ್ಪ ಇತರರಿದ್ದರು. 
ಕೊಪ್ಪಳ

ಅವಕಾಶ ಬಳಸಿಕೊಂಡು ಜೀವನ ರೂಪಿಸಿಕೊಳ್ಳಿ

ಅಳವಂಡಿ: ಅಂಗವಿಕಲಾರದರೂ ನಮ್ಮಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಚಿಕ್ಕ ಅವಕಾಶವನ್ನು ಬಳಸಿಕೊಂಡು ಸಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ತಿಳಿಸಿದರು.
ಸಮೀಪದ ಹೀರೇಸಿಂದೋಗಿ ಗ್ರಾಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ, ಗ್ರಾಮ ಪಂಚಾಯಿತಿ ಹಿರೇಸಿಂದೋಗಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಮನ್ವಯ ಗ್ರಾಮ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಅಂಗವಿಕರಿಗಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.5 ಅನುದಾನ ಮೀಸಲಿಟ್ಟಿದೆ. ಉದ್ಯೋಗ ವಸತಿ ಶಿಕ್ಷಣ ಸೇವಾ ಸೌಲಭ್ಯವನ್ನು ಒದಗಿಸಿದೆ ಎಂದು ತಿಳಿಸಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ ಕೆಲಸದ ಪ್ರಗತಿ ವರದಿ ಮಂಡನೆ ಮತ್ತು ಸೇವಾ ಸೌಲಭ್ಯವನ್ನು ಒದಗಿಸಿದ ವರದಿ ಮಂಡಿಸಿದರು. ಪಿಡಿಒ ಪ್ರಕಾಶ ಸಜ್ಜನ, ಕಾರ್ಯದರ್ಶಿ ಮಹೇಶ, ಪ್ರಮುಖರಾದ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಭರಮಪ್ಪ, ಈಶಪ್ಪ, ಸೋಮಪ್ಪ, ಲಕ್ಷ್ಮೀ, ಅನುಸೂಯಾ, ಪುನರ್ವಸತಿ ಕಾರ್ಯಕರ್ತ ರಾಘವೇಂದ್ರ ಇತರರಿದ್ದರು.